
ಪ್ರಗತಿವಾಹಿನಿ ಸುದ್ದಿ, ಬಾಗಲಕೋಟೆ : ಬಸವೇಶ್ವರ ವಿದ್ಯಾವರ್ಧಕ ಸಂಘದ ಮಾಜಿ ಗೌರವ ಕಾರ್ಯದರ್ಶಿ ,ಶಿರೂರಿನ ಪ್ರಗತಿ ಪರ ರೈತ ಸಿದ್ದಣ್ಣ ಶೆಟ್ಟರ ಅವರು ಶನಿವಾರ ಬೆಂಗಳೂರಿನಲ್ಲಿ ನಿಧನ ಹೊಂದಿದರು.
ಬಿ.ಟಿ.ಡಿ.ಎ ಸಭಾಪತಿ,ಎ.ಪಿ.ಎಂ.ಸಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ದಿವಂಗತರು ಬ.ವಿ.ವ ಸಂಘದ ಗೌರವ ಕಾರ್ಯದರ್ಶಿ, ಮೆಡಿಕಲ್ ಕಾಲೇಜ ಮಂಡಳಿ ಕಾರ್ಯಾಧ್ಯಕ್ಷರಾಗಿ ವಿವಿಧ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದರು.
ಮೃತರು ಪುತ್ರ, ಸಹೋದರ ಹುಬ್ಬಳ್ಳಿ ಕೆ.ಎಲ್.ಇ ಇಂಜನಿಯರಿಂಗ್ ಕಾಲೇಜ ಡೀನ್ ಡಾ.ಅಶೋಕ ಶೆಟ್ಟರ ಸೇರಿದಂತೆ ಅಪಾರ ಬಂಧುಬಳಗ ಅಗಲಿದ್ದಾರೆ, ಮೃತರ ಪಾರ್ಥಿವ ಶರೀರ ಬೆಂಗಳೂರನಿಂದ ಬೆಳಗ್ಗೆ ೧೧ ಗಂಟೆಗೆ ನಗರಕ್ಕೆ ಆಗಮಿಸಲಿದ್ದು, ಮಧ್ಯಾಹ್ನ ೩ ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ.
ಬ.ವಿ.ವ ಸಂಘದ ಕಾರ್ಯಾದ್ಯಕ್ಷ ಡಾ.ವೀರಣ್ಣ ಚರಂತಿಮಠ, ಡಿಸಿಸಿ ಬ್ಯಾಂಕ ಅದ್ಯಕ್ಷ ಅಜಯಕುಮಾರ ಸರನಾಯಕ ಅವರು ಸಿದ್ದಣ್ಣ ಶೆಟ್ಟರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ