
ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ನಾದ ಸುಧಾ ಸಂಗೀತ ಶಾಲೆ ಹಾಗೂ ಬದಲಾವಣೆಯ ಬೆಳಕು ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಅ.16, ಭಾನುವಾರ ಬೆಳಗ್ಗೆ 11 ಗಂಟೆಗೆ ಬಿಎಸ್ ಎನ್ ಎಲ್ ಆಫೀಸ್ ಹತ್ತಿರದ ಬಿ. ಕೆ. ಮಾಡೆಲ್ ಸ್ಕೂಲ್ ನಲ್ಲಿ 13ನೇ ವಾರ್ಷಿಕೋತ್ಸವ – “ತ್ರಯೋದಶೋತ್ಸವ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಹಿರಿಯ ಪತ್ರಕರ್ತ, ಪ್ರಗತಿ ವಾಹಿನಿ ಪ್ರಧಾನ ಸಂಪಾದಕ ಎಂ. ಕೆ. ಹೆಗಡೆ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಸಂಕೇಶ್ವರದ ಎಸ್ ಡಿ ವಿಎಸ್ ಪಿಯು ಕಾಲೇಜಿನ ಪ್ರಾಚಾರ್ಯೆ ಸರ್ವಮಂಗಳ ಯರಗಟ್ಟಿ, ಸಮಾಜ ಸೇವಕರಾದ ಸಂಕೇಶ್ವರದ ಗೌರಿ ಅಜ್ಜಣ್ಣವರ್ ವಿಶೇಷ ಆಮಂತ್ರಿತರಾಗಿ ಪಾಲ್ಗೊಳ್ಳುವರು.
ವಿದೂಷಿ ಶಾಂತಲಕ್ಷ್ಮೀ ನಾಗೇಂದ್ರನಾಥ, ವಿದ್ವಾನ್ ಎಂ. ಜಿ. ರಾವ್, ಬದಲಾವಣೆಯ ಬೆಳಕು ಫೌಂಡೇಶನ್ ಸಂಸ್ಥಾಪಕ ಶಿವಾನಂದ ಹಿರಟ್ಟಿ, ನಾದಸುಧಾ ಸಂಸ್ಥಾಪಕ ಹಾಗೂ ನಿರ್ದೇಶಕ ಡಾ. ಸತ್ಯನಾರಾಯಣ ಎಂ. ಎನ್. ಉಪಸ್ಥಿತರಿರುವರು.
ರಾಜೇಂದ್ರ ಭಂಡಾರಿ, ಎ. ಎ. ಸನದಿ ಹಾಗೂ ಪೂರ್ಣಿಮಾ ಪತ್ತಾರ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.
*ತ್ರಯೋದಶೋತ್ಸವದ ಅಂಗವಾಗಿ ಸಂಗೀತ, ನೃತ್ಯ ಹಾಗೂ ಹಾಸ್ಯ ಚಟಾಕಿ ಕಾರ್ಯಕ್ರಮಗಳು ನಡೆಯಲಿವೆ*
https://pragati.taskdun.com/latest/mysoru-dasaragombe-pradarshanadeepalankara/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ