Latest

ಮಹಿಳೆ ಹತ್ಯೆ ಮಾಡಿ, ರುಂಡ ಕೈಲಿ ಹಿಡಿದು ಬಂದ ವ್ಯಕ್ತಿ

ಪ್ರಗತಿವಾಹಿನಿ ಸುದ್ದಿ; ಭುಬನೇಶ್ವರ್: 30 ವರ್ಷದ ವ್ಯಕ್ತಿಯೊಬ್ಬ ವೃದ್ಧ ಮಹಿಳೆಯೊಬ್ಬರನ್ನು ಕೊಲೆಗೈದು, ಮಹಿಳೆಯ ರುಂಡ ಬೇರ್ಪಡಿಸಿ, ತಲೆಯನ್ನು ಕೈಯಲ್ಲೇ ಹಿಡಿದುಕೊಂಡು 1 ಕಿಮೀ ದೂರದ ಪೊಲೀಸ್ ಔಟ್​ಪೋಸ್ಟ್​ಗೆ ಹೋಗಿ ಶರಣಾಗಿರುವ ಅಮಾನುಷ ಘಟನೆ ಒಡಿಶಾದ ಜಾಜಪುರ್ ಜಿಲ್ಲೆಯ ಛತಾರಾ ಗ್ರಾಮದಲ್ಲಿ ನಡೆದಿದೆ.

ತನ್ನ ಸಂಬಂಧಿಕನೊಬ್ಬನ ಸಾವಿಗೆ ಕಾರಣರಾದರೆಂದು ಆರೋಪಿಸಿ ವ್ಯಕ್ತಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಕೊಲೆಯಾದ ಮಹಿಳೆಯನ್ನು ನಂದಿನಿ ಪೂರ್ತಿ ಎಂದು ಗುರುತಿಸಲಾಗಿದೆ. ಆರೋಪಿ ಕಾರ್ತಿಕ ಕೇರಾಯ್ ಈ ಕೃತ್ಯ ಎಸಗಿದ್ದಾನೆ. ಕೊಲೆಯಾದ ಮಹಿಳೆ ಮಾಟಮಂತ್ರ ಮಾಡುತ್ತಿದ್ದು, ಅನಾರೋಗ್ಯಪೀಡಿತನಾಗಿದ್ದ ತನ್ನ ಸಂಬಂಧಿಕನ ಸಾವಿಗೆ ಆಕೆಯೇ ಕಾರಣವೆಂದು ಬಗೆದು ಆಕೆಯ ಕೊಲೆ ಮಾಡಿದ್ದಾನೆನ್ನಲಾಗಿದೆ.

ಮಹಿಳೆಯ ಶವವನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Home add -Advt

Related Articles

Back to top button