
ತಿಪ್ಪೆಗುಂಡಿಯಲ್ಲಿ ಬಿದ್ದು ಹೊಡೆದಾಡಿಕೊಂಡ ಪೊಲೀಸರು, ವೀಡಿಯೋ ವೈರಲ್
ಪ್ರಗತಿವಾಹಿನಿ ಸುದ್ದಿ – ಕಾನ್ಪುರ್ : ಮೂವರು ಪೊಲೀಸರು ರಸ್ತೆಯಲ್ಲಿ ಮಕ್ಕಳಂತೆ ಹೋಡೆದಾಡಿಕೊಂಡ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯುಪಿ ಯ ಕಾನ್ಪುರ್ ದಲ್ಲಿ ನಡೆದ ಈ ಘಟನೆ ರಸ್ತೆಯಲ್ಲಿ ಸಾರ್ವಜನಿಕರಿಗೆ ಸಕತ್ ಮನೋರಂಜನೆ ನೀಡಿತ್ತು.
ನಾಯಿ ಮನುಷ್ಯನನ್ನು ಕಚ್ಚಿದರೆ ಏನೂ ವಿಶೇಷವಿಲ್ಲ, ಅದುವೇ ಮನುಷ್ಯ ನಾಯಿಯನ್ನು ಕಚ್ಚಿದರೆ ? ಎಸ್ ಅದು ನಿಜಕ್ಕೂ ವೈರಲ್ ಮತ್ತು ಕುತೂಹಲ. ಇಲ್ಲಿ ನಡೆದಿರೋ ಈ ಪ್ರಕರಣವು ಅಷ್ಟೇ, ಹೊಡೆದಾಡುವ ಪುಂಡ ಪೋಕರಿಗಳಿಗೆ ಬುದ್ದಿ ಹೇಳ ಬೇಕಿದ್ದ ಪೊಲೀಸರೇ ಹೊಡೆದಾಡಿಕೊಂಡು ಸಾರ್ವಜನಿಕವಾಗಿ ಹಾಸ್ಯಕ್ಕೆ ತುತ್ತಾಗಿದ್ದಾರೆ.
ನಾಡು ರಸ್ತೆಯ ಮೇಲೆ ನಿಂತಿರುವ ಪಿಆರ್‌ವಿ ವಾಹನ ಮತ್ತು ಹೊಡೆದಾಡುತ್ತಿರುವ ಪೊಲೀಸರನ್ನು ನೋಡಿದ ವಾಹನ ಸವಾರರು ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಈ ವಿಷಯ ಮೇಲಾಧಿಕಾರಿಗಳಿಗೆ ತಲುಪಿದಾಗ, ಅವರು ತಕ್ಷಣವೇ ಇಬ್ಬರು ಪೊಲೀಸರ ವಿರುದ್ಧ ತನಿಖೆ ಪ್ರಾರಂಭಿಸಿದ್ದಾರೆ. ಆ ನಂತರ ಆ ಪೊಲೀಸರು ಜಗಳಕ್ಕೆ ಕಾರಣವನ್ನು ನೀಡಿದಾಗ, ಕೇಳುಗರು ಕೂಡ ಬಿದ್ದು ಬಿದ್ದು ನಕ್ಕರು, ಹೌದು ವಾಹನದ ಮುಂಬದಿ ಸೀಟಿಗಾಗಿ ಉಂಟಾದ ಮಾತುಕತೆ, ತಿಪ್ಪೆಗುಂಡಿಯಲ್ಲಿ ಬಿದ್ದು ಹೊಡೆದಾಡುವ ಸ್ಥಿತಿಗೆ ತಲುಪಿತ್ತು.
ಹೊಡೆದಾಡಿಕೊಂಡ ಪೊಲೀಸರನ್ನು ರಾಜೇಶ್ ಮತ್ತು ಸುನಿಲ್ ಎನ್ನಲಾಗಿದೆ. ಸುದೀರ್ಘ ಪ್ರಯತ್ನದ ನಂತರ, ಅವರ ಜೊತೆಯಲ್ಲಿಯೇ ಇದ್ದ ಹೆಡ್ ಕಾನ್ಸ್ಟೇಬಲ್ ಇಬ್ಬರನ್ನೂ ಸಮಾಧಾನಪಡಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.////
ಇದನ್ನು ನೋಡಿ ….
////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ