
ಪ್ರಗತಿವಾಹಿನಿ ಸುದ್ದಿ, ಮಂಗಳೂರು – ದಕ್ಷಿಣ ಕನ್ನಡದಲ್ಲಿ ಐವರಲ್ಲಿ ಒಮೈಕ್ರಾನ್ ಪತ್ತೆಯಾಗಿದ್ದು, ರಾಜ್ಯದಲ್ಲಿ ಒಮೈಕ್ರಾನ್ ಸೋಂಕಿತರ ಸಂಖ್ಯೆ 14ಕ್ಕೆ ಏರಿದೆ.
ಬಂಟ್ವಾಳಾದ ವಸತಿ ನಿಲಯವೊಂದರ ನಾಲ್ವರು ವಿದ್ಯಾರ್ಥಿಗಳಲ್ಲಿ ಒಮೈಕ್ರಾನ್ ಪತ್ತೆಯಾಗಿದೆ. ಆದರೆ ಇವರ್ಯಾರೂ ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲ ಎಂದು ಗೊತ್ತಾಗಿದೆ. ಆದಾಗ್ಯೂ ಹೇಗೆ ಸೋಂಕು ತಗುಲಿತು ಎನ್ನುವುದು ಗೊತ್ತಾಗಬೇಕಿದೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಬೆಳಗಾವಿಯಲ್ಲೂ ನೈಜೀರಿಯಾದಿಂದ ಬಂದ ವ್ಯಕ್ತಿಯಲ್ಲಿ ಒಮೈಕ್ರಾನ್ ಪತ್ತೆಯಾಗಿದೆ.
ರಾಜ್ಯದಲ್ಲಿ ಮತ್ತೆ 5 ಜನರಲ್ಲಿ ಒಮಿಕ್ರಾನ್ ಪತ್ತೆ: ಬೆಳಗಾವಿಯಲ್ಲೂ ಓರ್ವರಿಗೆ ಒಮಿಕ್ರಾನ್?
ಒಮಿಕ್ರಾನ್ ಪತ್ತೆಯಾದರೂ ಬೆಳಗಾವಿಗೆ ತೆರಳಲು ಬಿಟ್ಟಿದ್ದೇಕೆ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ