Latest

ಒಮಿಕ್ರಾನ್ ಭೀತಿ: ರಾಜ್ಯ ಸರ್ಕಾರಕ್ಕೆ ತಜ್ಞರ ಸಲಹೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ ತಡೆಗಟ್ಟುವ ನಿಟ್ಟಿನಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ರಾಜ್ಯ ಸರ್ಕಾರಕ್ಕೆ ಹಲವು ಮಹತ್ವದ ಸಲಹೆ ನೀಡಿದ್ದು, ಕಟ್ಟೆಚ್ಚರ ವಹಿಸುವಂತೆ ಸೂಚಿಸಿದ್ದಾರೆ.

ವಿಧಾನಸೌಧದಲ್ಲಿ ಆರೋಗ್ಯ ಸಚಿವ ದಾ.ಸುಧಾಕರ್ ನೇತೃತ್ವದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಸಭೆ ನಡೆದಿದ್ದು, ಸಭೆಯಲ್ಲಿ ಕೊರೊನಾ ಮೂರನೆ ಅಲೆ ಹಾಗೂ ಒಮಿಕ್ರಾನ್ ತಡೆಗಟ್ಟಲು ಕೈಗೊಳ್ಳಬೇಕಿರುವ ಮುಂಜಾಗೃತಾ ಕ್ರಮಗಳ ಬಗ್ಗೆ ತಜ್ಞರು ಮಹತ್ವದ ಶಿಫಾರಸುಗಳನ್ನು ಮಾಡಿದರು.

ತಜ್ಞರ ಪ್ರಮುಖ ಸಲಹೆಗಳು:
ಒಮಿಕ್ರಾನ್ ಪತ್ತೆಯಾಗಿರುವ ದೇಶಗಳಿಂದ ಆಗಮಿಸಿರುವ ಪ್ರಯಾಣಿಕರ ಮೇಲೆ ತೀವ್ರ ನಿಗಾ,
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ಕಟೆಚ್ಚರ,
ವಿದೇಶಿ ಪ್ರಯಾಣಿಕರು 7 ದಿನ ಕಡ್ಡಾಯ ಕ್ವಾರಂಟೈನ್,
ಜನಸಂದಣಿ ಇರುವಲ್ಲಿ ರ್ಯಾಂಡಮ್ ಟೆಸ್ಟ್,
ಕಡ್ಡಾಯ ಲಸಿಕೆಗೆ ಸೂಚನೆ,
ಸರ್ಕಾರಿ ಸೌಲಭ್ಯಗಳಿಗೂ ವ್ಯಾಕ್ಸಿನ್ ಕಡ್ಡಾಯ,
ಶಿಕ್ಷಕರು, ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ,
ವಾರಕ್ಕೆ ಕನಿಷ್ಠ ಶೇ.5 ಮಕ್ಕಳಿಗೆ ಕೋವಿಡ್ ಪರೀಕ್ಷೆ,
ಸಭೆ, ಸಮಾರಂಭಗಳಿಗೆ ಜನರ ಮಿತಿ
ಹೊರಾಂಗಣ ಸಮಾರಂಭಗಳಿಗೆ 500 ಜನರಿಗೆ ಅವಕಾಶ,
ಸ್ವತ: ಜಿಲ್ಲಾಧಿಕಾರಿಗಳು ಗಡಿಯಲ್ಲಿ ನಿಗಾವಹಿಸಲು ಸೂಚನೆ.

ಒಮಿಕ್ರಾನ್ ಭೀತಿ ಮಧ್ಯೆ ಡೆಲ್ಟಾ ದಾಳಿ…?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button