*ನ್ಯಾನೊತಂತ್ರಜ್ಞಾನದ ಕುರಿತು, ಪ್ರಾಧ್ಯಾಪಕರಿಗೆ ಮೂರು ದಿನಗಳ ಕಾರ್ಯಾಗಾರಕ್ಕೆ ಚಾಲನೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಇದೇ ಜನವರಿ 17 ರಂದು ಬೆಳಗಾವಿಯ ಕೆಎಲ್ಎಸ್ ಜಿಆಯ್ ಟಿಯಲ್ಲಿ ನ್ಯಾನೊತಂತ್ರಜ್ಞಾನದ ಕುರಿತು ಪ್ರಾಧ್ಯಾಪಕರಿಗೆ ಮೂರು ದಿನಗಳ ಕಾರ್ಯಾಗಾರ ಉದ್ಘಾಟಿಸಲಾಯಿತು. ಮುಖ್ಯ ಅತಿಥಿಗಳಾದ ಕೆಎಸ್‌ಸಿಎಸ್‌ಟಿ ಕಾರ್ಯದರ್ಶಿ ಡಾ.ಅಶೋಕ್ ಎಂ.ರಾಯಚೂರು , ಐಐಎಸ್‌ಸಿ ಬೆಂಗಳೂರಿನ ಪ್ರಾಧ್ಯಾಪಕರು, ಸಭೆಯನ್ನು ಉದ್ದೇಶಿಸಿ ನ್ಯಾನೊತಂತ್ರಜ್ಞಾನದ ಉಜ್ಜ್ವಲ ಭವಿಷ್ಯದ ಕುರಿತು ತಿಳಿಸಿದರು.
ಗೌರವ ಅತಿಥಿಗಳಾಗಿ ಆಗಮಿಸಿದ, ಐಐಟಿ ಮದ್ರಾಸ್‌ನ ಪ್ರಾಧ್ಯಾಪಕ ಡಾ.ಬಸವರಾಜ ಎಂ.ಜಿ , ಮಾತನಾಡಿ, ಇನ್ನೂ ಇಂತಹ ಹೆಚ್ಚಿನ ಕಾರ್ಯಾಗಾರಗಳು ನಡೆಸಲು ಹಾಗೂ ಇದರ ಲಾಭ ಪಡೆಯಲು ಪ್ರಾಧ್ಯಾಪಕರಿಗೆ ಕರೆ ನೀಡಿದರು.
ಶ್ರೀ. ರಾಜೇಂದ್ರ ಬೆಳಗಾಂವಕರ ಛೇರ್ಮನ್ , ಜಿ ಆಯ್ ಟಿ, ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶೈಕ್ಷಣಿಕ ಮತ್ತು ಸಮಾಜದಲ್ಲಿ ನ್ಯಾನೊತಂತ್ರಜ್ಞಾನದ ಮಹತ್ವವನ್ನು ಒತ್ತಿ ಹೇಳಿದರು. ಡಾ.ಎಂ.ಎಸ್. ಪಾಟೀಲ, ಕೆಎಲ್‌ಎಸ್ ಜಿಐಟಿಯ ಪ್ರಾಚಾರ್ಯರು , ಜಿಆಯ್ ಟಿ ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥ, ಡಾ.ಆರ್.ಎಂ. ಕುಲಕರ್ಣಿ ಮತ್ತು ಸಂಚಾಲಕರು ಡಾ.ಎಸ್.ಎ.ಮಲ್ಲಾಡಿ ಈ ಕಾರ್ಯಕ್ರಮಕ್ಕೆ ಉಪಸ್ಥಿತರಿದ್ದರು. ಡಾ.ಪಿ.ಎಸ್. ಕೌಜಲಗಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. 30 ಕ್ಕೂ ಹೆಚ್ಚಿನ ಪ್ರಾಧ್ಯಾಪಕರು ಈ ಕಾರ್ಯಾಗಾರಕ್ಕೆ ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ