Kannada NewsKarnataka NewsLatest

ಕಾಂಗ್ರೆಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿದ ಚನ್ನರಾಜ ಹಟ್ಟಿಹೊಳಿ​

ಪ್ರಗತಿವಾಹಿನಿ ಸುದ್ದಿ, ​ನಿಪ್ಪಾಣಿ – ನಿಪ್ಪಾಣಿ ತಾಲೂಕಿನ ಮಾಂಗೂರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸೋಮವಾರ ಸಂಜೆ ಉದ್ಘಾಟಿಸಿದರು.
​ ಸ್ವತಃ ಬ್ಯಾಟ್ ಹಿಡಿದು ಕ್ರಿಕೆಟ್ ಆಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದ ಚನ್ನರಾಜ, ಇಂದಿನ ಯುವ ಪೀಳಿಗೆ ಮನೆಯಿಂದ ಹೊರಗೆ ಬಂದು ಆಟವಾಡುವುದನ್ನು ಕಾಣುವುದೇ ಅಪರೂಪವಾಗಿದೆ. ಕೈಯಲ್ಲಿ ಮೊಬೈಲ್ ಹಿಡಿದರೆ ಪ್ರಪಂಚವನ್ನೇ ಮರೆಯುವ ದಿನಗಳಿವು. ಇಂತಹ ಸಂದರ್ಭದಲ್ಲಿ ಯುವಕರು ಇಂತಹ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವುದು ನಿಜವಾಗಿ ಖುಷಿಯ ಸಂಗತಿ ಎಂದು ಹೇಳಿದರು.
ಕ್ರೀಡಾ ಚಟುವಟಿಕೆಗಳಿಗೆ ರಾಜ್ಯ ಮತ್ತು ಕೇಂದ್ರ ಸರಕಾರ ಇನ್ನಷ್ಟು ಪ್ರೋತ್ಸಾಹ, ಆದ್ಯತೆ ನೀಡಬೇಕಿದೆ. ಈ ದಿಸೆಯಲ್ಲಿ ವಿಧಾನ ಪರಿಷತ್ತಿನಲ್ಲಿ ಧ್ವನಿ ಎತ್ತಲಾಗುವುದು. ಪಠ್ಯ ಚಟುವಟಿಕೆಗಳಷ್ಟೇ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ಸಿಗಬೇಕೆನ್ನುವುದು ನಮ್ಮ ಧ್ಯೇಯವಾಗಿದೆ ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮಾಜಿ ಶಾಸಕರಾದ ಕಾಕಾಸಾಹೇಬ್ ಪಾಟೀಲ,​ ಸುಭಾಷ್ ಜೋಷಿ, ಮಾಜಿ ಸಚಿವ​ ವೀರಕುಮಾರ ಪಾಟೀಲ,​ ಕಾಂಗ್ರೆಸ್ ಚಿಕ್ಕೋಡಿ ಜಿಲ್ಲಾಧ್ಯಕ್ಷ​ ಲಕ್ಷ್ಮಣರಾವ್ ಚಿಂಗಳೆ,  ಪ್ರದೀಪ ಜಾಧವ್, ರಮೇಶ ಜಾಧವ್, ರಾಜು ಬಿಚಡೆ ​ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button