![](https://pragativahini.com/wp-content/uploads/2020/12/bomb-blast.jpg)
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ವಕೀಲರೊಬ್ಬರ ಜೇಬಿನಲ್ಲಿದ್ದ ಸ್ಮಾರ್ಟ್ ಫೋನ್ ಕೋರ್ಟ್ ಆವರಣದಲ್ಲೇ ಸ್ಫೋಟಗೊಂಡು ಆತಂಕ ಮೂಡಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ.
ಗೌರವ್ ಗುಲಾಟಿ ಎಂಬ ವಕೀಲರ ಮೊಬೈಲ್ ಕೋರ್ಟ್ ಆವರಣದಲ್ಲಿ ಏಕಾಏಕಿ ಸ್ಫೋಟಗೊಂಡಿದೆ. ಈ ಕುರಿತು ಸ್ವತ: ವಕೀಲ ಗೌರವ್ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ತನ್ನ ಜೇಬಿನಲ್ಲಿದ್ದ ಒನ್ ಪ್ಲಸ್ ಕಂಪನಿಯ ನಾರ್ಡ್-2 5G ಸ್ಮಾರ್ಟ್ ಫೋನ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದೆ. ಸ್ಪೋಟದ ಸಮಯದಲ್ಲಿ ನಾನು ಫೋನ್ ಬಳಸುತ್ತಿರಲಿಲ್ಲ. ಮೊದಲು ಫೋನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಕೆಲ ಸೆಕೆಂಡ್ ಗಳಲ್ಲೇ ಮೊಬೈಲ್ ಬ್ಲಾಸ್ಟ್ ಆಗಿದೆ. ನನಗೂ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.
ಒನ್ ಪ್ಲಸ್ ಕಂಪನಿ ಫೋನ್ ಸುರಕ್ಷತೆ ಬಗ್ಗೆ ಕಾನೂನು ಹೋರಾಟ ಮಾಡುತ್ತೇನೆ. ಕಂಪನಿ ಬ್ಯಾನ್ ಮಾಡುವಂತೆ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಒನ್ ಪ್ಲಸ್ ಕಂಪನಿ, ಫೋನ್ ಪರಿಶೀಲನೆ ನಡೆಸದೇ ಪರಿಹಾರ ನೀಡಲಾಗಲ್ಲ. ಸ್ಫೋಟ ಹೇಗೆ ಸಂಭವಿಸಿದೆ ಎಂಬುದನ್ನು ತಿಳಿಯಲು ಗೌರವ್ ಅವರನ್ನು ಸಂಪರ್ಕಿಸಿದ್ದೇವೆ. ಆದರೆ ಅವರು ಯಾವುದೇ ಪ್ರತಿಕ್ರಿಯೆಗೆ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ