Karnataka NewsLatest

ಒಂದು ತಿಂಗಳ ಸಂಬಳ, ಕೋಟಿ ರೂ. ಸಂಸದರ ನಿಧಿ ಪ್ರಧಾನಿ ಪರಿಹಾರ ನಿಧಿಗೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ತಮ್ಮ ಒಂದು ತಿಂಗಳ ಸಂಬಳ 1 ಲಕ್ಷ ರೂ. ಮತ್ತು ಸಂಸದರ ನಿಧಿಯಲ್ಲಿ ಒಂದು ಕೋಟಿ ರೂ.ಗಳನ್ನು ಕೊರೋನಾ ನಿಯಂತ್ರಣದ ಸಲುವಾಗಿ ಪ್ರಧಾನ ಮಂತ್ರಿಗಳ ನಿಧಿಗೆ ನೀಡುವುದಾಗಿ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಪ್ರಕಟಿಸಿದ್ದಾರೆ.
 ದೇಶಾದ್ಯಂತ ಎಲ್ಲ ಬಿಜೆಪಿ ಸಂಸದರು ತಮ್ಮ ಸಂಸದರ ನಿಧಿಯಿಂದ ಒಂದು ಕೋಟಿ ರೂ. ನೀಡುವಂತೆ ಸೂಚಿಸಲಾಗಿತ್ತು. ಅದರ ಜೊತೆಗೆ ತಮ್ಮ ಒಂದು ತಿಂಗಳ ವೇತನವನ್ನೂ ನೀಡುವುದಾಗಿ ಕೋರೆ ತಿಳಿಸಿದ್ದಾರೆ.
ಪ್ರಧಾನ ಮಂತ್ರಿಗಳ ಹೆಸರಿನಲ್ಲಿರುವ ಪರಿಹಾರ ನಿಧಿಗೆ ದೇಶಾದ್ಯಂತದಿಂದ ಹಣ ಹರಿದುಬರುತ್ತಿದೆ. ಚಿತ್ರನಟ ಅಕ್ಷಯ ಕುಮಾರ ತಮ್ಮ ಉಳಿತಾಯದ ಹಣದಲ್ಲಿ 25 ಕೋಟಿ ರೂ.ಗಳನ್ನು ಈಗಾಗಲೆ ನೀಡಿದ್ದಾರೆ. ರತನ್ ಟಾಟಾ 500 ಕೋಟಿ ರೂ. ನೀಡುವುದಾಗಿ ಘೋಷಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button