National

*50ರಷ್ಟು ಕಡಿಮೆ ದರದಲ್ಲಿ ಸಾಮಗ್ರಿಗಳ  ಮಾರಾಟ ಎಂದು ಒಂದು ಸಾವಿರ ವಂಚನೆ*

ಪ್ರಗತಿವಾಹಿನಿ ಸುದ್ದಿ : ತೆರೆದ ಮಾರುಕಟ್ಟೆಯಲ್ಲಿರುವ ಬೆಲೆಗಿಂತ ಶೇ. 50ರಷ್ಟು ಕಡಿಮೆ ದರದಲ್ಲಿ ಸಾಮಗ್ರಿಗಳನ್ನು ಮಾರಾಟ ಮಾಡುವುದಾಗಿ ಭರವಸೆ ನೀಡಿ ಕೇರಳ ರಾಜ್ಯಾದ್ಯಂತ ಸಾವಿರಾರು ಮಂದಿಯಿಂದ 1,000 ಕೋಟಿ ರೂ.ಗಿಂತಲೂ ಹೆಚ್ಚು ಹಣ ಸಂಗ್ರಹಿಸಿ ವಂಚಿಸಿರುವ ಘಟನೆ ನಡೆದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ಕ್ರೈಂ ಬ್ರಾಂಚ್ ತನಿಖೆ ನಡೆಸುತ್ತಿದ್ದು, ಜಾಲದ ಪ್ರಧಾನ ಆರೋಪಿ ಎನ್ನಲಾಗಿರುವ ತೊಡುಪುಳ ಕುಡಯತ್ತೂರು ಕೋಳಪ್ಪಚೂರಂ ಕುಳಂಗರ ನಿವಾಸಿ ಅನಂತಕೃಷ್ಣನ್ (36)ನನ್ನು ಬಂಧಿಸಲಾಗಿದೆ.

ಬಂಧಿತನ ಬ್ಯಾಂಕ್ ಖಾತೆಗೆ 400 ಕೋಟಿ ರೂ. ಜಮೆಯಾಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದು, ಅದರಲ್ಲಿ 3 ಕೋಟಿ ರೂ. ಮಾತ್ರವೇ ಇದೆ. ಕಾಸರಗೋಡು ಸಹಿತ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕೈಂ ಬ್ರಾಂಚ್ ತನಿಖೆ ನಡೆಸುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button