ಪ್ರಗತಿವಾಹಿನಿ ಸುದ್ದಿ,
ಬೆಂಗಳೂರು : ಈರುಳ್ಳಿ ಬೆಲೆ ದೇಶಾದ್ಯಂತ ಗಗನಕ್ಕೇರಿದೆ. ಮೊದಲೆಲ್ಲ ಈರುಳ್ಳಿ ಕತ್ತರಿಸುವಾಗ ಮಾತ್ರ ಕಣ್ಣಲ್ಲಿ ನೀರು ಬರುತ್ತಿತ್ತು, ಈಗ ಅದನ್ನು ಕೊಳ್ಳಲು ಸಹ ಕಣ್ಣೀರು ಬರುವ ಪ್ರಮೇಯ ಸೃಷ್ಟಿಯಾಗಿದೆ. ಪ್ರತಿ ಕೆ.ಜಿ.ಗೆ 200 ರೂ.ಗಳ ಬೆಲೆಯೊಂದಿಗೆ, ಸಾಮಾನ್ಯರನ್ನು ಕಂಗೆಡಿಸಿದೆ. ಒಂದು ಅಥವಾ ಎರಡು ಈರುಳ್ಳಿ ಮನೆಯಲ್ಲಿದ್ದರೆ ಅದ್ಭುತ ಎಂಬಂತಾಗಿದೆ.
ಈನಡುವೆ ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಈ ಬಗ್ಗೆ ಹಲವಾರು ಹಾಸ್ಯಾಸ್ಪದ ವಿಡಿಯೋ ಮತ್ತು ಚಿತ್ರಗಳು ವೈರಲ್ ಆಗಿವೆ. ಇತ್ತೀಚಿಗೆ ಬಾಗಲಕೋಟೆಯಲ್ಲಿ ನಡೆದ ಮದುವೆಯಲ್ಲಿ, ಸ್ನೇಹಿತರು ವಧು-ವರರಿಗೆ ಈರುಳ್ಳಿಯನ್ನು ಉಡುಗೊರೆಯಾಗಿ ನೀಡಿದರು. ಉಡುಗೊರೆಯನ್ನು ಕುತೂಹಲದಿಂದ ತೆರೆದ ವಧು-ವರ ಈರುಳ್ಳಿಯನ್ನು ಕಂಡು ನಗಲಾರಂಭಿಸಿದರು..
ನಿರ್ಮಲಾ ಸೀತಾರಾಮನ್ ಗೆ ಈರುಳ್ಳಿ ಪಾರ್ಸೆಲ್
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈರುಳ್ಳಿ ತಿನ್ನುತ್ತಿಲ್ಲ ಎಂದು ಹೇಳಿ ಈರುಳ್ಳಿಯನ್ನು ಪಾರ್ಸಲ್ ಮಾಡಲಾಗಿದೆ. ಈರುಳ್ಳಿ ಬೆಲೆ ಜನವರಿಯವರೆಗೆ ಕಡಿಮೆಯಾಗುವುದಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಈ ವಿಷಯವನ್ನು ಸಂಸತ್ತಿನಲ್ಲಿ ಚರ್ಚಿಸಲಾಯಿತಾದರು, ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು ಸರ್ಕಾರ ವಿಫಲವಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮನೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಿನ್ನುವುದಿಲ್ಲ ಮತ್ತು ಈರುಳ್ಳಿಯ ಬೆಲೆಯ ಬಗ್ಗೆ ತಿಳಿದಿಲ್ಲ ಎಂದು ಹೇಳಿದ್ದರು. ಈ ವಿವಾದಾತ್ಮಕ ಹೇಳಿಕೆಯ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದರು.
ಪೆರಂಬಲೂರ್ ಜಿಲ್ಲಾ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ಈರುಳ್ಳಿ ಬೆಲೆ ಕಡಿತ ಗೊಳಿಸಲು ವಿಫಲವಾದ ಪ್ರಧಾನಿ ಮತ್ತು ಸಚಿವ ನಿರ್ಮಲಾ ಸೀತಾರಾಮನ್ ಅವರಿಗೆ, ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಈರುಳ್ಳಿ ಪಾರ್ಸೆಲ್‌ಗಳನ್ನು ಕಳುಹಿಸಿಕೊಡಲಾಯಿತು.
ಅವರಿಗೆ ಕಳುಹಿಸಿದ ಪಾರ್ಸಲ್ ಜೊತೆಗೆ ಪತ್ರದಲ್ಲಿ .. ಈರುಳ್ಳಿ ತಿನ್ನದವರು ಮೊದಲು ತಿನ್ನಬೇಕು. ಆನಂತರ ಈರುಳ್ಳಿ ಬೆಲೆ ಕಡಿತಗೊಳಿಸಬೇಕು ಎಂದು ಡಿಮ್ಯಾಂಡ್ ಮಾಡಿದ್ದಾರೆ…. ಸಧ್ಯ ಈರುಳ್ಳಿ ಸಹ ರಾಷ್ಟ್ರ ಮಟ್ಟದ ಚರ್ಚೆಯ ಬಿಂದು ಆಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ