Kannada NewsLatest

ಆನ್ ಲೈನ್ ವಂಚಕರ ಹೆಡೆಮುರಿಕಟ್ಟಿದ ಬೆಳಗಾವಿ ಪೊಲೀಸರು; 2 ಕೋಟಿ 39 ಲಕ್ಷ ರೂಪಾಯಿಗೂ ಅಧಿಕ ಹಣ ಜಪ್ತಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಆನ್ ಲೈನ್ ವಂಚಕರ ವಿರುದ್ಧ ಕಾರ್ಯಾಚರಣೆ ಚುರುಕುಗೊಳಿಸಿರುವ ಬೆಳಗಾವಿ ಸಿಇಎನ್ ಠಾಣೆ ಪೊಲೀಸರು 2 ಕೋಟಿಗೂ ಅಧಿಕ ಹಣವನ್ನು ಜಪ್ತಿ ಮಾಡಿದ್ದಾರೆ.

ಬೆಳಗಾವಿ ಪೊಲೀಸ್ ಕಮೀಷನರ್ ವ್ಯಾಪ್ತಿಯಲ್ಲಿ ಒಂದೇ ವರ್ಷದಲ್ಲಿ 1,309 ಸೈಬರ್ ವಂಚನೆ ದೂರುಗಳು ದಾಖಲಾಗಿದ್ದವು. ಸಿಇಎನ್ ಇನ್ಸ್ ಪೆಕ್ಟರ್ ಬಿ.ಆರ್.ಗುಡ್ಡೇಕರ ತಂಡ ಕಾರ್ಯಾಚರಣೆ ನಡೆಸಿ ಒಂದು ವರ್ಷದಲ್ಲಿ ಸುಮಾರು 2 ಕೋಟಿ 39 ಲಕ್ಷ9 ಸಾವಿರ ರೂಪಾಯಿ ಹಣವನ್ನು ಜಪ್ತಿ ಮಾಡಿದ್ದಾರೆ.

ಸದ್ಯ ಸಿಇಎನ್ ಪೊಲೀಸರು 88 ಲಕ್ಷ ರೂಪಾಯಿ ಹಣವನ್ನು ವಂಚನೆಗೊಳಗಾದವರ ಖಾತೆಗೆ ಜಮಾ ಮಾಡಿದ್ದಾರೆ. ಇನ್ನುಳಿದ 1 ಕೋಟಿ 44 ಲಕ್ಷ 99 ಸಾವಿರ ಹಣವನ್ನು ಕಾನೂನು ಪ್ರಕ್ರಿಯೆ ನಂತರ ಹಸ್ತಾಂತರ ಮಾದಲಿದ್ದಾರೆ.

ಆನ್ ಲೈನ್ ವಂಚನೆಗೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸರು 30ಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಿದ್ದು, ಬೆಳಗಾವಿ ಪೊಲೀಸರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ಶಹಬ್ಬಾಸ್ ಬೆಳಗಾವಿ CEN ಪೊಲೀಸ್!

ಬಿಟ್ ಕಾಯಿನ್ ಪ್ರಕರಣ; ಐಷಾರಾಮಿ ಹೋಟೆಲ್ ನಲ್ಲಿ ತಂಗಿದ್ದ ಆರೋಪಿ ಬಂಧನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button