ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಇತ್ತೀಚೆಗೆ ಇಂತಹವುಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರ ಹಣವನ್ನು ಕುಳಿತಲ್ಲಿಂದಲೇ ದೋಚುವ ಜಾಲ ತುಂಬಾ ದಿನಗಳಿಂದಲೂ ಸಕ್ರಿಯವಾಗಿವೆ.
ಎಚ್ಚರಿಕೆಯಿಂದಿರಲು ಬ್ಯಾಂಕ್ ಗಳು ಸದಾ ಜಾಗೃತಗೊಳಿಸುವ ಸಂದೇಶಗಳನ್ನು ಕಳಿಸುತ್ತವೆ. ಆದರೆ ಜನ ಹಣದಾಸೆಗೆ ಬಲಿಯಾಗಿ, OTP ಮತ್ತು ತಮ್ಮ ಮಾಹಿತಿಯನ್ನು ಬಿಟ್ಟು ಕೊಡುವುದರೊಂದಿಗೆ ಬ್ಯಾಂಕ್ ನ ಹಣ ಕಳೆದುಕೊಂಡು ತೊಂದರೆಗೆ ಒಳಗಾಗುವುದಿದೆ.
ಬಲೆಗೆ ಬೀಳಿಸಲು ಇದೀಗ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಹೆಸರು ಮತ್ತು ಅವರು ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ಹೆಸರನ್ನು ಖದೀಮರು ಬಳಸಿಕೊಳ್ಳುತ್ತಿದ್ದಾರೆ.
ಹಿಂದಿ ಭಾಷೆಯಲ್ಲಿ WhatsApp ಮೂಲಕ ಅವರು ಕೊಡುವ ಲಕ್ಕಿ ನಂಬರ್ ಮತ್ತು ಕೊಟ್ಟಿರುವ ಮ್ಯಾನೇಜರ್ ನಂಬರ್ ಕರೆ ಮಾಡಿದರೆ, ನಿಮ್ಮ ಮಾಹಿತಿಗಳು ವಂಚಕರಿಗೆ ಲಭ್ಯವಾಗಿ, ಹಣ ದೋಚುವ ಸಂಭವ ಅತೀ ಹೆಚ್ಚು.
ಜಾವೇದ್ ರೆಲ್ ಹೆಸರಿನ ಉತ್ತರ ಪ್ರದೇಶವೆಂದು ತೋರಿಸುವ +91 93695 33402 ನಿಂದ ಆಡಿಯೋ ತುಣುಕು ಬರುತ್ತದೆ.
ಇದೊಂದೇ ಅಲ್ಲ, ಇಂತಹ ಬೇರೆ ಬೇರೆ ನಂಬರ್ ಗಳಿಂದ ಕರೆ, ಮೆಸೇಜ್ ಬರುತ್ತಿದೆ.
ಹಾಗಾಗೀ ಈ ತರಹದ ಮೇಸೆಜ್ ಗಳು ಬಂದಾಗ ತಕ್ಷಣವೇ ಬ್ಲಾಕ್ ಲಿಸ್ಟ್ ಗೆ ಸೇರಿಸಲು ಮರೆಯಬಾರದು. ನೀವು true caller App ಬಳಸುತ್ತಿದ್ದರೆ, ಇಂತಹ ನಂಬರ್ ಗಳನ್ನು ಕೆಂಪು ಮಾಡುವುದನ್ನು ಮರೆಯಬೇಡಿ.
ಎಲ್ಲಿ ಹೋದವು ನಮ್ಮೊಂದಿಗಿದ್ದ ಪಕ್ಷಿಗಳು ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ