
ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಆನ್ ಲೈನ್ ಕ್ಲಾಸ್ ಗಾಗಿ ತೆಗೆಸಿಕೊಟ್ಟಿದ್ದ ಮೊಬೈಲ್ ನಲ್ಲಿ ಇಡೀ ದಿನ ಗೇಮ್ ಆಡುತ್ತಿದ್ದ ಮಗನಿಗೆ ಪೋಷಕರು ಬೈದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ವಿಕಾರಾಬಾದ್ ನಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಉಪಾರಿ ಮುಕ್ತಾನಂದ ಎಂದು ಗುರುತಿಸಲಾಗಿದೆ. ಮುಕ್ತಾನಂದ 10ನೇ ತರಗತಿಯಲ್ಲಿ ಓದುತ್ತಿದ್ದ. ಆನ್ ಲೈನ್ ಕ್ಲಾಸ್ ಗಿಂತ ಮೊಬೈಲ್ ಗೇಮ್ ನಲ್ಲಿ ಆಸಕ್ತಿ ಹೊಂದಿದ್ದ ಮುಕ್ತಾನಂದನಿಗೆ ಪೋಷಕರು ಬೈದಿದ್ದರು.
ಇದಕ್ಕೆ ಬೇಸರಗೊಂಡು ಮುಕ್ತಾನಂದ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.