Kannada NewsKarnataka News

ನಾಳೆ ನವೀಕೃತ ಮಟೀರಿಯಲ್ ಟೆಸ್ಟಿಂಗ್ ಲ್ಯಾಬೋರೇಟರಿ ಉದ್ಘಾಟನೆ

ನಾಳೆ ನವೀಕೃತ ಮಟೀರಿಯಲ್ ಟೆಸ್ಟಿಂಗ್ ಲ್ಯಾಬೋರೇಟರಿ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನವೀಕೃತ ಮಟೀರಿಯಲ್ ಟೆಸ್ಟಿಂಗ್ ಲ್ಯಾಬೋರೇಟರಿ ಉದ್ಘಾಟನೆ ಶುಕ್ರವಾರ ನಡೆಯಲಿದೆ. ಸಂಜೆ 4 ಗಂಟೆಗೆ ರಾಮತೀರ್ಥ ನಗರದಲ್ಲಿ ಲ್ಯೋರೇಟರಿ ಉದ್ಘಾಟನೆ ನಡೆಯುವುದು.

13 ವರ್ಷದ ಹಿಂದೆ ಅಸ್ಥಿತ್ವಕ್ಕೆ ಬಂದಿರುವ ಕ್ಯಾಟಕಾನ್ ಸಂಸ್ಥೆ ಮಟೀರಿಯಲ್ ಟೆಸ್ಟಿಂಗ್ ಲ್ಯಾಬೋರೇಟರಿ ಸ್ಥಾಪಿಸಿದ್ದು, ಈಗ ಅತ್ಯಾಧುನಿಕ ಯಂತ್ರೋಪಕರಣಗಳೊಂದಿಗೆ ನವೀಕರಣಗೊಳಿಸುತ್ತಿದೆ.

Home add -Advt

ನಿವೃತ್ತ ಸುಪರಿಂಟೆಂಡೆಂಟ್ ಎಂಜಿನಿಯರ್ ವಿ.ಜಾವೂರ್, ಸ್ಮಾರ್ಟ್ ಸಿಟಿ ಮುಖ್ಯ ಎಂಜಿನಿಯರ್ ಎಂ.ನಾರಾಯಣ, ಲೋಕೋಪಯೋಗಿ ಇಲಾಖೆಯ ಸುಪರಿಂಟೆಂಡೆಂಟ್ ಎಂಜಿನಿಯರ್ ಎಚ್.ಸುರೇಶ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕ್ಯಾಟಕಾನ್ ಪಾಲುದಾರರಾದ ಪಿ.ಎಂ.ಗಾಣಿಗೇರ ಮತ್ತು ಬಿ.ಡಿ.ಜಾಧವ ತಿಳಿಸಿದ್ದಾರೆ.

Related Articles

Back to top button