Belagavi NewsBelgaum NewsKannada NewsKarnataka NewsTravel

*ಬೆಳಗಾವಿಯಿಂದ ವಿಶೇಷ ಬಸ್‌ಗಳ ಕಾರ್ಯಾಚರಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಚಿಕ್ಕೋಡಿ ವಿಭಾಗದ ಚಿಕ್ಕೋಡಿ, ನಿಪ್ಪಾಣಿ, ಸಂಕೇಶ್ವರ, ಹುಕ್ಕೇರಿ, ಗೋಕಾಕ, ರಾಯಬಾಗ, ಅಥಣಿ ಹಾಗೂ ಹುಕ್ಕೇರಿ ಘಟಕಗಳಿಂದ ಬೆಂಗಳೂರು, ಪೂಣೆ, ಸಾತಾರಾ, ಇಚಲಕರಂಜಿ, ಕೊಲ್ಲಾಪೂರ, ಮಿರಜ ಹಾಗೂ ಇತರೆ ಅಂತರರಾಜ್ಯ ಮಾರ್ಗಗಳಿಗೆ ಸೆಪ್ಟೆಂಬರ್ 11 ರಿಂದ 25 ರವರೆಗೆ ಹೆಚ್ಚುವರಿ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.

ಅಷ್ಟೇ ಅಲ್ಲದೇ ಗಣೇಶ ಹಬ್ಬ ಆಚರಿಸಲು ಬರುವ ಪ್ರಯಾಣಿಕರಿಗಾಗಿ ವಿಭಾಗದ ಎಲ್ಲ ಘಟಕಗಳಿಂದ ಸೆಪ್ಟೆಂಬರ್ 11 ಮತ್ತು 12 ರಂದು ಹೆಚ್ಚುವರಿ ವಾಹನಗಳನ್ನು ಬೆಂಗಳೂರಿನಿಂದ ವಿಭಾಗದ ತಾಲೂಕು ಕೇಂದ್ರಗಳಿಗೆ ಕಾರ್ಯಾಚರಣೆ ಮಾಡಲಾಗುವುದು. ಸಾರ್ವಜನಿಕ ಪ್ರಯಾಣಿಕರು ಈ ವಿಶೇಷ ಸಾರಿಗೆಗಳ ಪ್ರಯೋಜನ ಪಡೆಯಬಹುದು ಎಂದು ವಾಕರಸಾಸಂಸ್ಥೆ, ಚಿಕ್ಕೋಡಿ ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button