Belagavi NewsBelgaum NewsKannada NewsKarnataka NewsTravel

*ಬೆಳಗಾವಿಯಿಂದ ವಿಶೇಷ ಎಕ್ಸ್’ಪ್ರೆಸ್ ರೈಲುಗಳ ಸಂಚಾರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು, ನೈಋತ್ಯ ರೈಲ್ವೆಯು ಯಶವಂತಪುರದಿಂದ ಅಮೃತಸರಕ್ಕೆ, ಅರಸೀಕೆರೆಯಿಂದ ಹಜರತ್ ನಿಜಾಮುದ್ದೀನ್’ಗೆ ಮತ್ತು ಬೆಳಗಾವಿಯಿಂದ ಹಜರತ್ ನಿಜಾಮುದ್ದೀನ್’ಗೆ ಒನ್-ವೇ ವಿಶೇಷ ಎಕ್ಸ್’ಪ್ರೆಸ್ ರೈಲುಗಳನ್ನು ಓಡಿಸಲಿದೆ.

ರೈಲು ಸಂಖ್ಯೆ 06539 ಯಶವಂತಪುರ – ಅಮೃತಸರ ಒನ್ ವೇ ವಿಶೇಷ ಎಕ್ಸ್’ಪ್ರೆಸ್

ದಿನಾಂಕ 08.10.2026 (ಗುರುವಾರ) ರಂದು ರೈಲು ಸಂಖ್ಯೆ 06539 ಯಶವಂತಪುರದಿಂದ ರಾತ್ರಿ 22.40 ಗಂಟೆಗೆ ಹೊರಟು, ಭಾನುವಾರ 13.50 ಗಂಟೆಗೆ ಅಮೃತಸರ ತಲುಪಲಿದೆ.

ಮಾರ್ಗಮಧ್ಯದಲ್ಲಿ, ಈ ರೈಲು ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಅದೋನಿ, ಮಂತ್ರಾಲಯಂ ರೋಡ್, ರಾಯಚೂರು, ವಾಡಿ, ಕಲಬುರಗಿ, ಸೋಲಾಪುರ, ಕುರ್ದುವಾಡಿ, ದೌಂಡ್ ಜಂಕ್ಷನ್, ಅಹಿಲ್ಯಾನಗರ, ಕೊಪರ್’ಗಾಂವ್, ಮನ್ಮಾಡ್, ಭುಸಾವಲ್, ಖಾಂಡ್ವಾ, ಇಟಾರ್ಸಿ, ಜಬಲ್ಪುರ, ಕಟ್ನಿ, ಸತ್ನಾ, ಚಿತ್ರಕೂಟಧಾಮ ಕರ್ವಿ, ಬಂದಾ ಜಂಕ್ಷನ್, ವೀರಾಂಗನಾ ಲಕ್ಷ್ಮೀಬಾಯಿ ಝಾನ್ಸಿ, ಗ್ವಾಲಿಯರ್ ಜಂಕ್ಷನ್, ಆಗ್ರಾ ಕ್ಯಾಂಟ್, ಹಜರತ್ ನಿಜಾಮುದ್ದೀನ್, ನವದೆಹಲಿ, ಅಂಬಾಲಾ ಕ್ಯಾಂಟ್ ಜಂಕ್ಷನ್, ಲೂಧಿಯಾನ ಜಂಕ್ಷನ್, ಜಲಂಧರ್ ಸಿಟಿ ಜಂಕ್ಷನ್ ಮತ್ತು ಬಿಯಾಸ್ ಜಂಕ್ಷನ್ ನಿಲ್ದಾಣಗಳಲ್ಲಿ ನಿಲ್ಲಲಿದೆ.

ಈ ವಿಶೇಷ ರೈಲು 11 ಸ್ಲೀಪರ್ ಕ್ಲಾಸ್, 07 ಜನರಲ್ ದ್ವಿತೀಯ ದರ್ಜೆ ಮತ್ತು ದಿವ್ಯಾಂಗಸ್ನೇಹಿ ಬೋಗಿಯನ್ನು ಹೊಂದಿರುವ 02 ದ್ವಿತೀಯ ದರ್ಜೆಯ ಲಗೇಜ್-ಕಮ್-ಬ್ರೇಕ್ ವ್ಯಾನ್’ಗಳು ಸೇರಿದಂತೆ ಒಟ್ಟು 20 ಬೋಗಿಗಳನ್ನು ಹೊಂದಿರುತ್ತದೆ.

ರೈಲು ಸಂಖ್ಯೆ 06261 ಅರಸೀಕೆರೆ – ಹಜರತ್ ನಿಜಾಮುದ್ದೀನ್ ಒನ್ ವೇ ವಿಶೇಷ ಎಕ್ಸ್’ಪ್ರೆಸ್

ದಿನಾಂಕ 08.10.2026 (ಗುರುವಾರ) ರಂದು ರೈಲು ಸಂಖ್ಯೆ 06261 ಅರಸೀಕೆರೆಯಿಂದ 16.45 ಗಂಟೆಗೆ ಹೊರಟು, ಶನಿವಾರ 16.00 ಗಂಟೆಗೆ ಹಜರತ್ ನಿಜಾಮುದ್ದೀನ್ ತಲುಪಲಿದೆ.

ಮಾರ್ಗಮಧ್ಯದಲ್ಲಿ ಈ ರೈಲು ಬೀರೂರು, ದಾವಣಗೆರೆ, ಎಸ್ಎಮ್ಎಮ್ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಬದಾಮಿ, ಬಾಗಲಕೋಟೆ, ವಿಜಯಪುರ, ಸೋಲಾಪುರ, ಕುರ್ದುವಾಡಿ, ದೌಂಡ್, ಅಹಿಲ್ಯಾನಗರ, ಕೊಪರ್’ಗಾಂವ್, ಮನ್ಮಾಡ್, ಭುಸಾವಲ್, ಖಾಂಡ್ವಾ, ಇಟಾರ್ಸಿ, ಜಬಲ್ಪುರ, ಕಟ್ನಿ, ಸತ್ನಾ, ಚಿತ್ರಕೂಟಧಾಮ ಕರ್ವಿ, ಬಂದಾ, ವೀರಾಂಗನಾ ಲಕ್ಷ್ಮೀಬಾಯಿ ಝಾನ್ಸಿ, ಗ್ವಾಲಿಯರ್ ಜಂಕ್ಷನ್ ಮತ್ತು ಆಗ್ರಾ ಕ್ಯಾಂಟ್ ನಿಲ್ದಾಣಗಳಲ್ಲಿ ನಿಲ್ಲಲಿದೆ.

ಈ ವಿಶೇಷ ರೈಲು 10 ಸ್ಲೀಪರ್ ಕ್ಲಾಸ್, 08 ಜನರಲ್ ದ್ವಿತೀಯ ದರ್ಜೆ ಮತ್ತು ದಿವ್ಯಾಂಗಸ್ನೇಹಿ ಬೋಗಿಯನ್ನು ಹೊಂದಿರುವ 02 ದ್ವಿತೀಯ ದರ್ಜೆಯ ಲಗೇಜ್-ಕಮ್-ಬ್ರೇಕ್ ವ್ಯಾನ್’ಗಳು ಸೇರಿದಂತೆ ಒಟ್ಟು 20 ಬೋಗಿಗಳನ್ನು ಹೊಂದಿರುತ್ತದೆ.

*ರೈಲು ಸಂಖ್ಯೆ 07331 ಬೆಳಗಾವಿ – ಹಜರತ್ ನಿಜಾಮುದ್ದೀನ್ ಒನ್ ವೇ ವಿಶೇಷ ಎಕ್ಸ್’ಪ್ರೆಸ್

ದಿನಾಂಕ 08.10.2026 (ಗುರುವಾರ) ರಂದು ರೈಲು ಸಂಖ್ಯೆ 07331 ಬೆಳಗಾವಿಯಿಂದ 18.30 ಗಂಟೆಗೆ ಹೊರಟು, ಶನಿವಾರ 15.00 ಗಂಟೆಗೆ ಹಜರತ್ ನಿಜಾಮುದ್ದೀನ್ ತಲುಪಲಿದೆ.

ಮಾರ್ಗಮಧ್ಯದಲ್ಲಿ ಈ ರೈಲು ಘಟಪ್ರಭಾ, ರಾಯಬಾಗ, ಕುಡಚಿ, ಮಿರಜ್, ಸಾಂಗ್ಲಿ, ಕರಾಡ್, ಸತಾರಾ, ಪುಣೆ, ದೌಂಡ್, ಅಹಿಲ್ಯಾನಗರ, ಕೊಪರ್’ಗಾಂವ್, ಮನ್ಮಾಡ್, ಭುಸಾವಲ್, ಖಾಂಡ್ವಾ, ಇಟಾರ್ಸಿ, ಜಬಲ್ಪುರ, ಕಟ್ನಿ, ಸತ್ನಾ, ಚಿತ್ರಕೂಟಧಾಮ ಕರ್ವಿ, ಬಂದಾ, ವೀರಾಂಗನಾ ಲಕ್ಷ್ಮೀಬಾಯಿ ಝಾನ್ಸಿ, ಗ್ವಾಲಿಯರ್ ಜಂಕ್ಷನ್ ಮತ್ತು ಆಗ್ರಾ ಕ್ಯಾಂಟ್ ನಿಲ್ದಾಣಗಳಲ್ಲಿ ನಿಲ್ಲಲಿದೆ.

ಈ ವಿಶೇಷ ರೈಲು 09 ಸ್ಲೀಪರ್ ಕ್ಲಾಸ್, 09 ಜನರಲ್ ದ್ವಿತೀಯ ದರ್ಜೆ ಮತ್ತು ದಿವ್ಯಾಂಗಸ್ನೇಹಿ ಬೋಗಿಯನ್ನು ಹೊಂದಿರುವ 02 ದ್ವಿತೀಯ ದರ್ಜೆಯ ಲಗೇಜ್-ಕಮ್-ಬ್ರೇಕ್ ವ್ಯಾನ್’ಗಳು ಸೇರಿದಂತೆ ಒಟ್ಟು 20 ಬೋಗಿಗಳನ್ನು ಹೊಂದಿರುತ್ತದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button