*ಸೆ.20ರಂದು ಬೆಳಗಾವಿ ತಲುಪಲಿರುವ ಭಾರತ ಯಾತ್ರೆ; OPS ಜಾರಿಗಾಗಿ ನೌಕರರಿಂದ ಬೃಹತ್ ಬೈಕ್ ರ್ಯಾಲಿ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: NPS ವಿರೋಧಿಸಿ OPS ಜಾರಿಗೊಳಿಸಲು ಆಗ್ರಹಿಸಿ ನಡೆಯುವ ಭಾರತ ಯಾತ್ರೆಯಲ್ಲಿ ಎಲ್ಲಾ ನೌಕರರು ಭಾಗವಹಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ ಮಾಡಿದೆ.
ದಿನಾಂಕ 05/09/2023 ರಂದು ದೇಶ್ಯಾದಂತ ಸರಕಾರಿ ನೌಕರರಿಗೆ ಮಾರಕವಾಗಿರುವ ಎನ್.ಪಿ.ಎಸ್ ವಿರೋಧಿಸಿ, ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸುವ ಬೇಡಿಕೆಯೊಂದಿಗೆ ಕನ್ಯಾಕುಮಾರಿಯಿಂದ ಪ್ರಾರಂಭವಾಗಿರುವ ಭಾರತ ಯಾತ್ರೆಯು ದಿನಾಂಕ: 20/09/2023 ರಂದು ಬೆಳಗಾವಿಯಲ್ಲಿ ಜರುಗಲಿದೆ. ಯಾತ್ರೆಯಲ್ಲಿ ಸುಮಾರು 2000 ಕ್ಕೂ ಹೆಚ್ಚು ನೌಕರರು ಭಾಗವಹಿಸಲಿದ್ದಾರೆ. ಅಖಿಲ ಭಾರತ ಶಿಕ್ಷಕರ ಫೆಡರೇಷನ್ (AIPTF) ಕಾರಾಧ್ಯಕ್ಷರಾದ ಬಸವರಾಜ ಗುರಿಕಾರ ಹಾಗೂ ರಾಷ್ಟ್ರ ಮಟ್ಟದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಿಂದ (ರಾಣಿ ಚನ್ನಮ್ಮಳ ಪುತ್ಥಳಿಗೆ ಮಾಲಾರ್ಪಣೆ ಮಾಡುವುದರೊಂದಿಗೆ ಸುಮಾರು 2000 ಕ್ಕೂ ಹೆಚ್ಚು ನೌಕರರಿರುವ ಬೈಕ್’ ಕ್ಯಾಲಿ ಮುಂಜಾನೆ 10:30 ಕ್ಕೆ ಪ್ರಾರಂಭವಾಗಿ ಬಿದ್ದ ಮುಂಭಾಗದಿಂದ ಕೃಷ್ಣದೇವರಾಯ (ಕೊಲ್ಲಾಪುರಿ) ವೃತ್ತ- ರಾಮದೇವ ಹೊಟೇಲ್ – ಜೆ.ಎನ್.ಎಮ್.ಸಿ ವೃತ್ತ ದಿಂದ ಬಲ ತಿರುವು ತೆಗೆದುಕೊಂಡು ಕೆ.ಪಿ.ಟಿ.ಸಿ.ಎಲ್ ಸಭಾಭವನದ ವರೆಗೆ ನಡೆಯುವುದು. ನಂತರ ಕೆ.ಪಿ.ಟಿ.ಸಿ.ಎಲ್ ಸಭಾಂಗಣದಲ್ಲಿ ಸಭೆ ನಡೆಯು್ಲಿದೆ. ಬಳಿಕ ಯಾತ್ರೆಯು ಖಾನಾಪೂರದವರೆಗೆ ಸಾಗಲಿದೆ. ಅಲ್ಲಿಯೂ ಸಭೆ ಆಯೋಜಿಸಲಾಗಿದ್ದು, ಅಲ್ಲಿಂದ ಕಿತ್ತೂರಗೆ ಯಾತ್ರೆ ತೆರಳಿ ಅಲ್ಲಿಯ ಸಭೆಯ ನಂತರ ಹೆದ್ದಾರಿ ಮಾರ್ಗವಾಗಿ ಧಾರವಾಡಕ್ಕೆ ಯಾತ್ರೆ ಮುಂದುವರೆಯಲಿದೆ.
ಈ ಯಾತ್ರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೌಕರರು ಭಾಗವಹಿಸಿ ಯಾತ್ರೆಯನ್ನು ಯಶಸ್ವಿಗೊಳಿಸಿ, NPS ವಿರೋಧಿಸಿ OPS ಜಾರಿಗೊಳಿಸುವಂತೆ ಆಗ್ರಹಿಸಲು ಶಿಕ್ಷಕರ ಸಂಘದ ಅಧ್ಯಕ್ಷ ಜಯಕುಮಾರ ಹೆಬ್ಳಿ ವಿನಂತಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ