Kannada NewsKarnataka News

199 ಅತಿಥಿ ಶಿಕ್ಷಕರ ನೇಮಕಕ್ಕೆ ಆದೇಶ

ಖಾನಾಪುರ ತಾಲ್ಲೂಕಿನ ವಿವಿಧ ಶಾಲೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲ್ಲೂಕಿನ ವಿವಿಧ ಗ್ರಾಮಗಳ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ತಾಲ್ಲೂಕಿನ ಅತೀ ಅವಶ್ಯವಿದ್ದ ಶಾಲೆಗಳಲ್ಲಿ ಒಟ್ಟು 199
ಅತಿಥಿ ಶಿಕ್ಷಕರನ್ನು ಅತಿಥಿ ಶಿಕ್ಷಕರ ನೇಮಕಾತಿ ಷರತ್ತುಗಳಿಗೊಳಪಟ್ಟು ನೇಮಕ
ಮಾಡಿಕೊಳ್ಳಲು ಆಯಾ ಶಾಲೆಗಳಿಗೆ ಅಧಿಕಾರ ನೀಡಲಾಗಿದೆ.

ಈಗಾಗಲೇ ಸ್ಥಳೀಯ ಬಿಇಒ ಕಚೇರಿಯ ಸೂಚನಾ ಫಲಕದಲ್ಲಿ ಅತಿಥಿ ಶಿಕ್ಷಕರ ಅವಶ್ಯಕತೆ ಇರುವ ಶಾಲೆಗಳ ಪಟ್ಟಿಯನ್ನು ಪ್ರಕಟಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳ ಸಮೇತ ಅತಿಥಿ ಶಿಕ್ಷಕರ ಬೇಡಿಕೆ ಇರುವ ಶಾಲೆಗಳನ್ನು ನ.20ರ ಒಳಗೆ ಸಂಪರ್ಕಿಸಿ ಅರ್ಜಿ
ಸಲ್ಲಿಸಬಹುದಾಗಿದೆ ಎಂದು ಬಿಇಒ ಲಕ್ಷ್ಮಣರಾವ್ ಯಕ್ಕುಂಡಿ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

ಇಂದು ಬಂಗಾರದ ಬೆಲೆ ಯಾವ ನಗರದಲ್ಲಿ ಎಷ್ಟಿದೆ?

Home add -Advt

Related Articles

Back to top button