ಮುಂದಿನ ವರ್ಷವೂ ನಮ್ಮದೆ ಸರ್ಕಾರ ಮುಂದುವರೆಯಲಿದೆ, ನಾನು ಹ್ಯಾಟ್ರಿಕ್ ಸಾಧಿಸಲಿದ್ದೇನೆ – ಸಚಿವೆ ಶಶಿಕಲಾ ಜೊಲ್ಲೆ, ರಾಜ್ಯಕ್ಕೊಂದು ವಿಶೇಷ ರೈಲು, ಏನಿದು ವಿಶೇಷ?
ರಾಜ್ಯಕ್ಕೆ ಒಂದು ರೈಲು ಕಲ್ಪಿಸಲಿದ್ದು, ಎಂಜಿನ್ ಹಿಂದಿನ ಬೋಗಿಯಲ್ಲಿ ಭಜನೆಗೆ ಅವಕಾಶ ಕಲ್ಪಿಸಲಾಗುವುದು ಹಾಗೂ ಆ ರೈಲಿನಲ್ಲಿ ಮುಂಜಾನೆಯ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಊಟ, ಮಲಗುವ ವ್ಯವಸ್ಥೆ ಎಲ್ಲ ರೈಲಿನಲ್ಲಿಯೇ ವ್ಯವಸ್ಥೆ ಮಾಡಲಾಗುವುದು. ಅದರಲ್ಲಿ ಒಂದು ಬದಿಗೆ ರಾಜ್ಯದ ಎಲ್ಲ ಮಂದಿರಗಳ ಹಾಗೂ ಇನ್ನೊಂದು ಬದಿಗೆ ಕಾಶಿಯ ಮಂದಿರದ ಚಿತ್ರಗಳು ಇರಲಿವೆ. ಇಂತಹ ಮೊದಲ ರೈಲ್ವೆಯ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯವರು ಬರಲಿದ್ದು ಭಾಗ್ಯ ನಮ್ಮ ರಾಜ್ಯಕ್ಕೆ ಒದಗಲಿದೆ’
-ಶಶಿಕಲಾ ಜೊಲ್ಲೆ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ –
’ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಸಾದಿಸಿದಂತೆ ಮುಂದಿನ ವರ್ಷ ಜರುಗಲಿರುವ ರಾಜ್ಯದ ಚುನಾವಣೆಯಲ್ಲೂ ಪಕ್ಷಕ್ಕೆ ಭಾರಿ ಗೆಲುವು ಸಿಕ್ಕು ನಮ್ಮದೆ ಸರ್ಕಾರ ಮುಂದುವರೆಯಲಿದೆ. ಜೊತೆಗೆ ನಾನೂ ಸಹ ಹ್ಯಾಟ್ರಿಕ್ ಸಾಧಿಸಲಿದ್ದೇನೆ’ ಎಂದು ಮುಜರಾಯಿ, ವಕ್ಫ್ ಮತ್ತು ಹಜ್ ಸಚಿವೆ ಶಶಿಕಲಾ ಜೊಲ್ಲೆ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ಜರುಗಿದ ಕಾರ್ಯಕ್ರಮವೊಂದರ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು ’ಹ್ಯಾಟ್ರಿಕ್ ನಂತರ ಕ್ಷೇತ್ರದ ಚಿತ್ರಣವೆಲ್ಲ ಬದಲಿಸಲಿದೆ. ಅಧಿವೇಶನದ ನಂತರ ಚುನಾವಣೆವರೆಗೂ ಸಹ ಕ್ಷೇತ್ರದ ಅಭಿವೃದ್ಧಿಯ ಚಿತ್ರಣವೇ ಬೇರೆ ಇರಲಿದೆ. ಚುನಾವಣೆಯ ತಾಲೀಮು ಈಗಿನಿಂದ ಆರಂಭಿಸಲಾಗುವುದು’ ಎಂದರು.
’ಕಾಶಿ ವಿಶ್ವನಾಥ ದೇವರ ದರ್ಶನ ತೆಗೆದುಕೊಂಡಲ್ಲಿ, ಗಂಗಾನದಿಯಲ್ಲಿ ಸ್ನಾನ ಮಾಡಿದಲ್ಲಿ ನಮಗೆ ಮುಕ್ತಿ ಸಿಗುತ್ತದೆ ಎಂದು ಹೇಳುತ್ತಾರೆ. ಪ್ರತಿವರ್ಷ ರಾಜ್ಯದ ೩೦ ಸಾವಿರ ಭಕ್ತರು ಕಾಶಿಗೆ ಹೋಗಿ ದರ್ಶನ ಪಡೆದುಕೊಂಡು ಬರಬೇಕೆಂಬ ನಿಟ್ಟಿನಲ್ಲಿ ಪ್ರತಿಯೊಬ್ಬ ಭಕ್ತರಿಗೆ ರೂ.೫ ಸಾವಿರ ಸಬ್ಸಿಡಿಯನ್ನು ಬಜೆಟ್ ನಲ್ಲಿ ಮಂಜೂರಿ ಮಾಡಕೊಳ್ಳಲಾಗಿದೆ. ಮೊದಲ ಹಂತದಲ್ಲೆ ನನ್ನ ಕ್ಷೇತ್ರದ ಜನರು ದರ್ಶನಕ್ಕೆ ಹೋಗಬೇಕೆಂಬ ನನ್ನಾಸೆಯಾಗಿದೆ’ ಎಂದರು.
’ಭಾರತ ಗೌರವ ಹೆಸರಿನಲ್ಲಿ ಕೇಂದ್ರ ಸರ್ಕಾರವು ಪ್ರವಾಸೋದ್ಯಮ ಇಲಾಖೆಯಿಂದ ಒಂದು ಯೋಜನೆ ರೂಪಿಸಿದೆ. ಈಚೆಗೆ ಕೇಂದ್ರ ರೈಲ್ವೆ ಸಚಿವರಿಗೆ ಭೇಟಿಯಾದ ಸಂದರ್ಭದಲ್ಲಿ ಅವರು ’ದೇಶದ ಯಾರೊಬ್ಬ ಧರ್ಮಾದಾಯ ಇಲಾಖೆಯವರು ಇಂತಹ ಯೋಜನೆಯಾಗಲಿ, ಬಡವರಿಗೆ ದರ್ಶನ ಮಾಡಿಸುವ ಉದ್ದೇಶದಿಂದ ನನ್ನ ಹತ್ತಿರ ಬಂದಿರಲಿಲ್ಲ. ಮೊದಲ ಬಾರಿ ಕರ್ನಾಟಕ ರಾಜ್ಯವು ನನ್ನೊಂದಿಗೆ ಈ ಕುರಿತು ಮಾತನಾಡಿದೆ ಎಂದಿದ್ದಾರೆ. ಆದ್ದರಿಂದ ರಾಜ್ಯಕ್ಕೆ ಒಂದು ರೈಲು ಕಲ್ಪಿಸಲಿದ್ದು, ಎಂಜಿನ್ ಹಿಂದಿನ ಬೋಗಿಯಲ್ಲಿ ಭಜನೆಗೆ ಅವಕಾಶ ಕಲ್ಪಿಸಲಾಗುವುದು ಹಾಗೂ ಆ ರೈಲಿನಲ್ಲಿ ಮುಂಜಾನೆಯ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿಯ ಊಟ, ಮಲಗುವ ವ್ಯವಸ್ಥೆ ಎಲ್ಲ ರೈಲಿನಲ್ಲಿಯೇ ವ್ಯವಸ್ಥೆ ಮಾಡಲಾಗುವುದು. ಅದರಲ್ಲಿ ಒಂದು ಬದಿಗೆ ರಾಜ್ಯದ ಎಲ್ಲ ಮಂದಿರಗಳ ಹಾಗೂ ಇನ್ನೊಂದು ಬದಿಗೆ ಕಾಶಿಯ ಮಂದಿರದ ಚಿತ್ರಗಳು ಇರಲಿವೆ. ಇಂತಹ ಮೊದಲ ರೈಲ್ವೆಯ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿಯವರು ಬರಲಿದ್ದು ಭಾಗ್ಯ ನಮ್ಮ ರಾಜ್ಯಕ್ಕೆ ಒದಗಲಿದೆ’ ಎಂದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ, ಹಾಲಶುಗರ್ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ಎಂಡಿ ಶಿವ ಕುಲಕರ್ಣಿ, ಸಂಚಾಲಕರು ಉಪಸ್ಥಿತರಿದ್ದರು.
ಜನರ ಮೇಲೆ ಹರಿದ ಕಾರು; ಶಾಕರನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ ಗ್ರಾಮಸ್ಥರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ