Kannada NewsKarnataka NewsLatest

ಉಕ್ಕಿಹರಿಯುತ್ತಿದೆ ಕೃಷ್ಣೆ: ಡಿಸಿ ಸೇರಿ ಹಿರಿಯ ಅಧಿಕಾರಿಗಳಿಂದ ಪರಿಶೀಲನೆ

ಪ್ರಗತಿವಾಹಿನಿ ಸುದ್ದಿ,  ಮಾಂಜರಿ – ಮಹಾರಾಷ್ಟ್ರ ರಾಜ್ಯದ ಘಟ್ಟ ಪ್ರದೇಶದಲ್ಲಿ ಮತ್ತು ಕೃಷ್ಣಾ ನದಿಯ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ  ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ.
 ಚಿಕ್ಕೋಡಿ ತಾಲೂಕಿನ  ಮಾಂಜರಿ, ಯಡೂರು, ಕಲ್ಲೊಳ ಗ್ರಾಮಕ್ಕೆ ಇಂದು ಬೆಳಗಾವಿಯ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ್ ಮತ್ತು ಇತರ ಹಿರಿಯ ಅಧಿಕಾರಿಗಳು  ಭೇಟಿ ನೀಡಿ ಕೃಷ್ಣಾ ನದಿ ಪ್ರವಾಹ ಮಾಹಿತಿಯನ್ನು ಪಡೆದುಕೊಂಡರು.
ಈ ವೇಳೆ ಜಿಲ್ಲಾ ಪಂಚಾಯಿತಿಯ ಕಾರ್ಯದರ್ಶಿ ಕೆವಿ ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ,ಲಕ್ಷ್ಮಣ್ ನಿಂಬರ್ಗಿ, ಚಿಕ್ಕೋಡಿ ಉಪವಿಭಾಗಾಧಿಕಾರಿ ರವೀಂದ್ರ ಕರ್ಲಿಂಗ್ ನವರ್,  ಚಿಕ್ಕೋಡಿಯ ತಹಶೀಲ್ದಾರ ಸುಭಾಶ  ಸಂಪಗಾವಿ  ಹಾಗೂ ಪೊಲೀಸ್ ಅಧಿಕಾರಿಗಳು ಇದ್ದರು.
 ಜಿಲ್ಲಾಧಿಕಾರಿಗಳು ಕೃಷ್ಣಾ ನದಿ ಪ್ರವಾಹದ ಮಾಹಿತಿಯನ್ನು ಪಡೆದುಕೊಂಡು ಎಲ್ಲಾ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕೆಂದು ಸೂಚಿಸಿದರು. ಇದೇವೇಳೆ  ಯಡೂರ ಗ್ರಾಮದಲ್ಲಿರುವ  ಎನ್ ಡಿ ಆರ್ ಎಫ್  ಅಧಿಕಾರಿಗಳ ಜೊತೆ ಪ್ರವಾಹದ ಮಾಹಿತಿಯನ್ನು ಪಡೆದುಕೊಂಡು,  ತಮ್ಮ ಆರೋಗ್ಯ ಕಾಪಾಡಿಕೊಂಡು ಜನರ ಸಂರಕ್ಷಣೆಗಾಗಿ ಸಿದ್ಧರಾಗಬೇಕೆಂದು ಹೇಳಿದರು.

Related Articles

Related Articles

Back to top button