Kannada NewsKarnataka NewsLatest

ಕಲ್ಲೇಹೋಳ ಗ್ರಾಮದ ಅಭಿವೃದ್ಧಿ ಕಾರ್ಯಗಳ ಅವಲೋಕನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಲ್ಲೆಹೋಳ ಗ್ರಾಮದ ಅರಿಶಿಣ ಕುಂಕುಮ ಕಾರ್ಯಕ್ರಮದಲ್ಲಿ ಭಾಗಿಯಾದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಗ್ರಾಮಸ್ಥರ ಕುಶಲೋಪರಿ ವಿಚಾರಿಸಿ, ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತು ಮೆಲುಕು ಹಾಕಿದರು.

ಈ ವೇಳೆ ಗ್ರಾಮದಲ್ಲಿ ಈ ಹಿಂದೆ ಎಂದೂ ನಡೆಯದಂಥ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಕ್ಕಾಗಿ ಗ್ರಾಮಸ್ಥರು ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಕೃತಜ್ಞತೆ ಸಲ್ಲಿಸಿ, ಅವರ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Home add -Advt

ಇದೇ ವೇಳೆ ಗ್ರಾಮದ ಮಹಿಳೆಯರು ಅವರಿಗೆ ಅರಿಶಿಣ ಕುಂಕುಮ ನೀಡಿ ಶುಭ ಹಾರೈಸಿದರು. ಯುವ ಕಾಂಗ್ರೆಸ್ ಮುಖಂಡ  ಮೃಣಾಲ್ ಹೆಬ್ಬಾಳಕರ ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಅಶ್ವಿನಿ ಕನ್ನೂರಕರ್, ಎಲ್ ಎನ್ ಪಾಟೀಲ, ಯುವರಾಜ ಕದಂ, ವಸಂತ ಪಾಟೀಲ, ನಿರ್ಮಲಾ ಶಹಾಪುರಕರ್, ಧನಶ್ರೀ ಪಾಟೀಲ, ಕೃಷ್ಣ ಪಾಟೀಲ, ಲಕ್ಷ್ಮಣ ಕಣಬರ್ಕರ್, ರಾಜಾರಾಮ್ ದೇವರಮನಿ, ಪಾಂಡುರಂಗ ದೇವರಮನಿ, ಸ್ವರಾಜ ಯುವಕ ಮಂಡಳ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಮಕ್ಕಳ ಅಭಿವ್ಯಕ್ತಿಗೆ ಶಾಲೆ ವೇದಿಕೆಯಾಗಲಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button