ಪ್ರಗತಿವಾಹಿನಿ ಸುದ್ದಿ; ನಾಸಿಕ್: ಆಕ್ಸಿಜನ್ ಸೋರಿಕೆಯಾದ ಪರಿಣಾಮ ಮಹಾರಾಷ್ಟ್ರದ ನಾಸಿಕ್ ಆಸ್ಪತ್ರೆಯೊಂದರಲ್ಲಿ 22 ರೋಗಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಡಾ.ಜಾಕೀರ್ ಹುಸೇನ್ ಆಸ್ಪತ್ರೆಯಲ್ಲಿ ದುರಂತ ಸಂಭವಿಸಿದೆ. ರೋಗಿಗಳಿಗೆ ಅಳವಡಿಸಲಾಗಿದ್ದ ಆಕ್ಸಿಜನ್ ಟ್ಯಾಂಕ್ ಸೋರಿಕೆಯಾಗಿ ಈ ದುರ್ಘಟನೆ ಸಂಭವಿಸಿದೆ. ಮೃತರಲ್ಲಿ ಹಲವರು ಕೋವಿಡ್ ರೋಗಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಮಾಹಿತಿ ನೀಡಿರುವ ಸಚಿವ ಡಾ.ರಾಜೇಂದ್ರ ಶಿಂಗಾನೆ, ಆಸ್ಪತ್ರೆಯಲ್ಲಿ ನಡೆದ ಈ ದುರಂತ ದುರದೃಷ್ಟಕರ. ಘಟನೆ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಪ್ರಕರಣವನ್ನು ತನಿಖೆಗೂ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಗಂಭೀರ ಪ್ರಕರಣವೊಂದನ್ನು ಮುಚ್ಚಿ ಹಾಕುವ ಹುನ್ನಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ