Latest

ಮತ್ತೊಂದು ಆಕ್ಸಿಜನ್ ಟ್ಯಾಂಕ್ ದುರಂತ; 27 ರೋಗಿಗಳು ಸಜೀವ ದಹನ

ಪ್ರಗತಿವಾಹಿನಿ ಸುದ್ದಿ; ಬಾಗ್ದಾದ್: ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕ್ ಸ್ಫೋಟಗೊಂಡು ಸಂಭವಿಸಿದ ಬೆಂಕಿ ದುರಂತದಲ್ಲಿ ರೋಗಿಗಳು ಸೇರಿದಂತೆ 27 ಜನರು ಸಜೀವ ದಹನಗೊಂಡಿರುವ ಘಟನೆ ಇರಾಕ್ ನಲ್ಲಿ ಸಂಭವಿಸಿದೆ.

ಇರಾಕ್ ನ ಆಗ್ನೇಯ ಬಾಗ್ದಾದ್ ನ ದಿಯಾಲಾ ಬ್ರಿಡ್ಜ್ ಏರಿಯಾದಲ್ಲಿರುವ ಇಬ್ನ್ ಖತೀಬ್ ಆಸ್ಪತ್ರೆಯ ಐಸಿಯು ವಾರ್ಡ್ ನಲ್ಲಿ ಆಕ್ಸಿಜನ್ ಟ್ಯಾಂಕ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. 27 ಜನ ಸಾವನ್ನಪ್ಪಿದ್ದಾರೆ, 46 ಜನರು ಗಾಯಗೊಂಡಿದ್ದಾರೆ.

120 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 90 ಜನರನ್ನು ರಕ್ಷಿಸಲಾಗಿದೆ ಎಂದು ಇರಾಕ್ ನಾಗರಿಕ ರಕ್ಷಣಾ ಘಟಕದ ಮುಖ್ಯಸ್ಥರು ತಿಳಿಸಿದ್ದಾರೆ.
ಸಡಿಲಿಕೆ ಅವಧಿ ಮುಗೀತು; ಮತ್ತೆ ಕರ್ಫ್ಯೂ ಶುರು

Related Articles

Back to top button