Latest

ಪಿ.ವಿ.ಸಿಂಧು ಜೊತೆ ಐಸ್ ಕ್ರೀಂ ಸವಿದ ಪ್ರಧಾನಿ ಮೋದಿ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಟೋಕಿಯೋ ಒಲಂಪಿಕ್ಸ್ ಕ್ರೀಡಾಕೂಟದಿಂದ ವಾಪಸ್ ಆದ ಬಳಿಕ ನಿಮ್ಮ ಜೊತೆ ಐಸ್ ಕ್ರೀಂ ತಿನ್ನುವುದಾಗಿ ಪ್ರಧಾನಿ ಮೋದಿ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧುಗೆ ಭರವಸೆ ನೀಡಿದ್ದರು. ಅದರಂತೆ ಕೊಟ್ಟ ಮಾತನ್ನು ಪ್ರಧಾನಿ ಮೋದಿ ಉಳಿಸಿಕೊಂಡಿದ್ದಾರೆ.

ಒಲಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಪಿ.ವಿ.ಸಿಂಧು ಜೊತೆಗೆ ಪ್ರಧಾನಿ ಮೋದಿ ಐಸ್ ಕ್ರೀಂ ಸೇವಿಸಿದ್ದಾರೆ. ಒಲಂಪಿಕ್ಸ್ ನಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುಗಳಿಗೆ ಔತಣಕೂಟ ಏರ್ಪಡಿಸಿದ್ದ ಪ್ರಧಾನಿ ಮೋದಿ ಈ ವೇಳೆ ಪಿ.ವಿ.ಸಿಂಧು ಜೊತೆ ಐಸ್ ಕ್ರೀಂ ಸೇವಿಸಿದ್ದಾರೆ.

ಒಲಂಪಿಕ್ಸ್ ಗೂ ಮೊದಲು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರೀಡಾಪಟುಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದ ಪ್ರಧಾನಿ ಮೋದಿ, ಪಿ.ವಿ.ಸಿಂಧು ಬಳಿ ಅವರ ಡಯಟ್ ಬಗ್ಗೆ ಕೇಳಿದ್ದರು. ಆಗ ಕಠಿಣ ಅಭ್ಯಾಸ, ಡಯಟ್ ಕಾರಣಕ್ಕೆ ತಾನು ತನ್ನಿಷ್ಟದ ಐಸ್ ಕ್ರೀಂ ಸೇವಿಸುತ್ತಿಲ್ಲ ಎಂದು ಸಿಂಧು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ ಒಲಂಪಿಕ್ಸ್ ನಿಂದ ಮರಳಿದ ಬಳಿಕ ಒಟ್ಟಿಗೆ ಐಸ್ ಕ್ರೀಂ ತಿನ್ನೋಣ ಎಂದಿದ್ದರು. ಇದೀಗ ಒಲಂಪಿಕ್ ಪದಕ ಪಡೆದ ಪಿ.ವಿ.ಸಿಂಧು ಜೊತೆ ಐಸ್ ಕ್ರೀಂ ಸೇವಿಸಿದ ಫೋಟೋ ಭಾರಿ ವೈರಲ್ ಆಗಿದೆ.
ಶಾಲೆಗಳ ಆರಂಭಕ್ಕೆ ಇಂದೇ ಮಾರ್ಗಸೂಚಿ ಪ್ರಕಟ

Home add -Advt

Related Articles

Back to top button