Kannada NewsKarnataka NewsLatest

ನ. 10 ರಿಂದ 17 ರವರೆಗೆ ಪಾದುಕಾ ಮಹಾ ಸಮಾರಾಧನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ನ. 10 ರಿಂದ 17 ರವರೆಗೆ 8 ದಿನಗಳ ಕಾಲ ವಿಶ್ವಮಾಧ್ವ ಪರಿಷತ್ ಬೆಳಗಾವಿ ಘಟಕದ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿನ ಬಿ.ಕೆ. ಪ್ರೌಢಶಾಲೆಯ ಮೈದಾನದಲ್ಲಿ ನಡೆಯಲಿದೆ.
ಅನೇಕ ಮಾಧ್ವ ಪೀಠಾಧಿಪತಿಗಳ ಉಪಸ್ಥಿತಿಯಲ್ಲಿ `ಪಾದುಕಾ ಮಹಾ ಸಮಾರಾಧನೆ’ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಶ್ರೀ ಮನ್ನ್ಯಾಯಸುಧಾ ಮಂಗಳ ಮಹೋತ್ಸವ, ಶ್ರೀ ಮನ್ಮಧ್ವ ಸಿದ್ಧಾಂತಾಭಿವೃದ್ಧಿ ಕಾರಿಣೀ ಸಭಾ, ಶ್ರೀ ಸತ್ಯಪ್ರಮೋದ ತೀರ್ಥರ 23 ನೇ ಪಾದುಕಾ ಮಹಾ ಸಮಾರಾಧನಾ ಮಹೋತ್ಸವ ಮತ್ತು ವಿಶ್ವ ಮಧ್ವ ಮಹಾಪರಿಷತ್ ಅಧಿವೇಶನ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ನಡೆಯಲಿವೆ.
ಬಿ.ಕೆ. ಮಾಡೇಲ್ ಪ್ರೌಢಶಾಲೆಯ ಆವರಣದಲ್ಲಿ ನಡೆಯುವ ಸ್ಥಳಕ್ಕೆ ಶ್ರೀ ಸತ್ಯಪ್ರಮೋದ ನಗರ ಎಂದು ಹೆಸರಿಡಲಾಗಿದೆ.
ಪೇಜಾವರ ಮಠದ ಶ್ರೀ ವಿಶ್ವೇಶ್ವ ತೀರ್ಥರು, ಆದಮಾರು ಮಠದ ಶ್ರೀ ವಿಶ್ವಪ್ರೀಯತೀರ್ಥರು, ಭಂಡಾರಕೇರಿಮಠದ ಶ್ರೀ ವಿದ್ಯೇಶತೀರ್ಥರು,. ಕಾಣಿಯೂರಮಠದ ಶ್ರೀ ವಿದ್ಯಾವಲ್ಲಭತೀರ್ಥರು, ಸುಬ್ರಮಣ್ಯಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥರು ಮತ್ತು ಭೀಮನಕಟ್ಟಿ ಮಠದ ಶ್ರೀ ರಘುವರೇಂದ್ರತೀರ್ಥರು ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ದಿನಾಂಕದಂದು ಉಪಸ್ಥಿತರಿರುವರು.

ಪೀಠಾಧಿಪತಿಗಳ ಮತ್ತು ವಿದ್ವಾಂಸರ ಸಮ್ಮುಖದಲ್ಲಿ ಜಯತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳ ಸುಧಾನುವಾದ ಹಾಗೂ ಪರೀಕ್ಷಾ ಸತ್ರವು ದಿನಾಂಕ 10 ರಿಂದ 13 ರವರೆಗೆ ನಡೆಯಲಿದೆ. ಸಂಸ್ಥಾನ ಪೂಜೆ, ಪರೀಕ್ಷಾ ಹಾಗೂ ಅನುವಾದ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿದ್ವಾಂಸರ ಉಪನ್ಯಾಸಗಳು ಮತ್ತು ವಿಶೇಷ ಉಪನ್ಯಾಸಗಳು ನಡೆಯಲಿವೆ.
ದಿನಾಂಕ 14 ರಂದು ಶ್ರೀ ಮನ್ನ್ಯಾಯಸುಧಾ ಮಂಗಳ ಮಹೋತ್ಸವ ನಡೆಯಲಿದೆ.  ಇದೇ ಸಂದರ್ಭದಲ್ಲಿ ವ್ಯಾಸಪೂಜೆ, ಗುರುಪೂಜೆ, ವಿದ್ವತ್ ಪೂಜೆ, ಮತ್ತು ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಸಂಜೆ ಪುಸ್ತಕಗಳ ಅನಾವರಣ ಮತ್ತು ಶ್ರೀಪಾದಂಗಳವರ ಅಮೃತೋಪದೇಶ ಮತ್ತು ಜಯತೀರ್ಥ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನವಾಗಲಿದೆ.
ದಿನಾಂಕ 15 ರಂದು ವಿಶೇಷ ಉಪನ್ಯಾಸ ಮತ್ತು ಧ್ಯಾನ ಪ್ರಮೋದ ಪ್ರಶಸ್ತಿ ಪ್ರಧಾನ ಹಾಗೂ ಶ್ರೀಪಾದಂಗಳವರ ಅಮೃತೋಪದೇಶ ನಡೆಯಲಿದೆ. ದಿನಾಂಕ 16  ರಂದು ವಿಶೇಷ ಉಪನ್ಯಾಸಗಳು, ಸಂಸ್ಕೃತಿ ಸಂಸ್ಕೃತ ಪ್ರಶ್ನೋತ್ತರ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ದಿನಾಂಕ 17 ರಂದು ಸಮಾರೋಪ ಸಮಾರಂಭ ನಡೆಯಲಿದೆ. ಅಂದೂ ಸಹ ವಿಶೇಷ ಉಪನ್ಯಾಸಗಳು ಸೇರಿದಂತೆ ಶ್ರೀಮೂಲರಾಮದೇವರ ಮಹಾ ಪೂಜೆ ನಡೆಯಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button