Kannada NewsKarnataka NewsLatest
*BREAKING: ವಿದ್ಯಾರ್ಥಿನಿಗೆ ಖಾರದ ಪುಡಿ ಎರಚಿ, ಕತ್ತು ಕೊಯ್ದು ಕೊಲೆಗೈದ ಪಾಗಲ್ ಪ್ರೇಮಿ*

ಪ್ರಗತಿವಾಹಿನಿ ಸುದ್ದಿ: ಕಾಲೇಜು ವಿದ್ಯಾರ್ಥಿನಿಯ ಕಣ್ಣಿಗೆ ಖಾರದ ಪುಡಿ ಎರಚಿ, ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡೊರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಮಲ್ಲೇಶ್ವರಂ ಮಂತ್ರಿ ಮಾಲ್ ಹಿಂಭಾಗದ ಶ್ರೀರಾಂಪುರ ರೈಲ್ವೆ ಹಳಿ ಬಳಿ ಈ ಘಟನೆ ನಡೆದಿದೆ. ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ವಿದ್ಯಾರ್ಥಿನಿಯನ್ನು ಹಿಂಬಾಲಿಸಿಕೊಂಡು ಬಂದು ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕತ್ತು ಕೊಯ್ದು ಪರಾರ್ಯಾಗಿದ್ದಾನೆ. ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
20 ವರ್ಷದ ಪ್ರಿಯಾ ಕೊಲೆಯಾದ ಯುವತಿ. ವಿಗ್ನೇಶ್ ಕೊಲೆಗೈದಿರುವ ಆರೋಪಿ. ವಿದ್ಯಾರ್ಥಿನಿ ಎಂದಿನಂತೆ ಕಾಲೇಜು ಮುಗಿಸಿ ಮಧ್ಯಾಹ್ನ ಮನೆಯತ್ತ ತೆರಳುತ್ತಿದ್ದಳು ಈ ವೇಳೆ ಆಕೆಯನ್ನು ಹಿಂಬಾಲಿಸಿಇಕೊಂಡು ಬಂದಿರುವ ಯುವಕ ಈ ಕೃತ್ಯವೆಸಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಪತ್ತೆಗೆ ಬಲೆ ಬೀಸಲಾಗಿದೆ.