
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತನ್ನನ್ನು ಪ್ರೀತಿಸಲು ನಿರಾಕರಿಸಿದ್ದ ಯುವತಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಪಾಗಲ್ ಪ್ರೇಮಿಯನ್ನು ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ದೀಪಕ್ ಬಂಧಿತ ಆರೋಪಿ. ಹಲವು ದಿನಗಳಿಂದ ಯುವತಿಯೊಬ್ಬಳ ಹಿಂದೆ ಬಿದ್ದಿದ್ದ ದೀಪಕ್ ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ. ಇದಕ್ಕೆ ಯುವತಿ ನಿರಾಕರಿಸಿದ್ದಳು.
ಇತ್ತೀಚೆಗೆ ಯುವತಿಯ ಮನೆ ಬಳಿ ಬಂದ ದೀಪಕ್ ಮತ್ತೆ ಅದೇ ಕ್ಯಾತೆ ಆರಂಭಿಸಿದ್ದಾನೆ. ಯುವತಿ ಹಾಗೂ ದೀಪಕ್ ನಡುವೆ ಗಲಾಟೆ ಆರಂಭವಾಗಿದೆ. ಈ ವೇಳೆ ದೀಪಕ್ ಯುವತಿಯ ಹೊಟ್ಟೆ, ಬೆನ್ನು, ಕೈಗಳಿಗೆ ಚಾಕುವಿನಿಂದ ಮನ ಬಂದಂತೆ ಇರಿದು ಪರಾರಿಯಾಗಿದ್ದಾನೆ. ಈ ಬಗ್ಗೆ ಯುವತಿ ಪೋಷಕರು ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಆರೋಪಿ ದೀಪಕ್ ನನ್ನು ಬಂಧಿಸಿದ್ದಾರೆ.