*ಖಾಸಗಿ ಫೋಟೋ ಕಳುಹಿಸಿ ನಿಶ್ಚಿತಾರ್ಥವಾಗಿದ್ದ ಯುವತಿಯ ಮದುವೆಯನ್ನು ನಿಲ್ಲಿಸಿದ್ದ ಭೂಪ; ಪಾಗಲ್ ಪ್ರೇಮಿ ಅರೆಸ್ಟ್*
ಪ್ರಗತಿವಾಹಿನಿ ಸುದ್ದಿ: ನಿಶ್ಚಿತಾರ್ಥವಾಗಿದ್ದ ಯುವತಿಯ ಜೀವನವನ್ನೇ ಹಾಳು ಮಾಡಿದ್ದ ಪಾಗಲ್ ಪ್ರೇಮಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಮುತ್ತುರಾಜ್ (೨೪) ಬಂಧಿತ ಆರೋಪಿ. ಯುವತಿ ತನ್ನನ್ನು ಪ್ರೀತಿಸಿ ಕೈಕೊಟ್ಟು ಈಗ ಬೇರೊಬ್ಬನ ಜೊತೆ ವಿವಾಹವಾಗಲು ಸಿದ್ದಳಾಗಿದ್ದಕ್ಕೆ ಆಕೆಯ ನಿಶ್ಚಿತಾರ್ಥವಾದ ಬಳಿಕ ಗಂಡಿನ ಮನೆಯವರಿಗೆ ಯುವತಿಯ ಖಾಸಗಿ ಫೋಟೋ ಕಳುಹಿಸಿ ಮದುವೆಯನ್ನು ನಿಲ್ಲಿಸಿದ್ದ ಅರೋಪಿ ಬಳಿಕ ಪರಾರಿಯಾಗಿದ್ದ.
ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಯುವತಿಯ ಖಾಸಗಿ ಫೋಟೊಗಳನ್ನು ನೋಡಿದ ಗಂಡಿನ ಮನೆಯವರು ಯುವತಿಯ ಮನೆಗೆ ಬಂದು ಗಲಾಟೆ ಮಾಡಿದ್ದರು. ಅಲ್ಲದೇ ವರ ಮದುವೆಯಾಗಲ್ಲ ಎಂದು ಮದುವೆಯನ್ನು ನಿಲ್ಲಿಸಿದ್ದ. ನಿಶ್ಚಿತಾರ್ಥವಾಗಿದ್ದ ಮದುವೆ ನಿಂತಿದ್ದಕ್ಕೆ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಅಲ್ಲದೇ ಖಾಸಗಿ ಫೋಟೋ ಕಳುಹಿಸಿದ್ದ ಆರೋಪಿ ಮುತ್ತುರಾಜ್ ವಿರುದ್ಧ ದೂರು ದಾಖಲಿಸಿದ್ದಳು.
ಇದೀಗ ಆರೋಪಿ ಮುತ್ತುರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿಯ ಪಕ್ಕದ ಮನೆಯ ಹುಡುಗನೆ ಆಗಿದ್ದ ಮುತ್ತುರಾಜ್ ಯುವತಿಯನ್ನು ಪ್ರೀತಿಸಿದ್ದ. ಆದರೆ ಎರಡೂ ಕುಟುಂಬದವರು ಮದುವೆಗೆ ಒಪ್ಪಿರಲಿಲ್ಲ. ಈ ವೇಳೆ ಆರೋಪಿ ಮುತ್ತುರಾಜ್ ಯುವತಿಗೆ ಇಬ್ಬರ ಮದುವೆ ಸಾಧ್ಯವಿಲ್ಲ ನೀನು ಬೇರೆ ಮದುವೆಯಾಗುವಂತೆ ಹೇಳಿ ಒಪ್ಪಿಸಿದ್ದ. ಇದರಂತೆ ಯುವತಿ ಮನೆಯವರು ಬೇರೆ ಯುವಕನನ್ನು ನೋಡಿ ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದರು. ನಿಶ್ಚಿತಾರ್ಥವಾಗುತ್ತಿದ್ದಂತೆ ಕಿರಾತಕ ಮುತ್ತುರಾಜ್ ಯುವತಿಯ ಖಾಸಗಿ ಫೋಟೋಗಳನ್ನು ಗಂಡಿನ ಮನೆಯವರಿಗೆ ಕಳುಹಿಸಿದ್ದಾನೆ. ಗಲಾಟೆಯಾಗುತ್ತಿದ್ದಂತೆ ಎಸ್ಕೇಪ್ ಆಗಿದ್ದ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ