Latest

ಸೆಕ್ಸ್ ವಿಡಿಯೋ ಇದೆ ಎಂದು ಶಿರಸ್ತೆದಾರನಿಗೆ ಬ್ಲ್ಯಾಕ್ ಮೇಲ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸೆಕ್ಸ್ ವಿಡಿಯೋ ಬಹಿರಂಗ ಮಾಡುವುದಾಗಿ ಹೇಳಿ ಶಿರಸ್ತೆದಾರರೊಬ್ಬರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕೆ.ಆರ್.ಪುರಂ ಪೊಲೀಸರು ಬಂಧಿಸಿದ್ದಾರೆ.

ಗಣಪತಿ ನಾಯಕ್, ಕಿಶನ್ ಹಾಗೂ ಕೇಶವನ್ ಬಂಧಿತ ಆರೋಪಿಗಳು. ಆರೋಪಿಗಳ ಪೈಕಿ ಗಣಪತಿ ನಾಯಕ್ ಲಾಯರ್ ಜಗದೀಶ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

Home add -Advt

ಕೋಲಾರದಲ್ಲಿ ಕೆಲಸ ಮಾಡುತ್ತಿದ್ದ ಶಿರಸ್ತೆದಾರರಿಗೆ ಯುವತಿಯೋರ್ವಳ ಪರಿಚಯವಾಗಿದ್ದು, ಆಕೆಯೊಂದಿಗೆ ಸಂಬಂಧ ಹೊಂದಿದ್ದರು. ಯುವತಿ ಖಾಸಗಿ ಕ್ಷಣಗಳ ವಿಡಿಯೋ ರೆಕಾರ್ಡ್ ಮಾಡಿದ್ದಳು. ಆ ವಿಡಿಯೋವನ್ನು ಕಿಶನ್ ಎಂಬಾತನಿಗೆ ರವಾನಿಸಿದ್ದಳು. ವಿಡಿಯೋ ವಾಟ್ಸಪ್ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ್ದ ಕಿಶನ್ ಹಾಗೂ ಇನ್ನಿಬ್ಬರು ಆರೋಪಿಗಳು, 25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.

ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಬಹಿರಂಗಗೊಳಿಸುವುದಾಗಿ ಬೆದರಿಸಿದ್ದರು. ಇದರಿಂದ ಕಂಗೆಟ್ಟ ಶಿರಸ್ತೆದಾರ ಕೆ.ಆರ್.ಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ಇದೀಗ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಯುವತಿಗಾಗಿ ಹುಡುಕಾಟ ನಡೆಸಿದ್ದಾರೆ.

Related Articles

Back to top button