Kannada NewsKarnataka News

ಆಡುತ್ತ ಆಡುತ್ತ ನಾಗರ ಹಾವಿಗೇ ಕೈ ಹಾಕಿದ ಬಾಲಕ – ಮೈ ಜುಮ್ಮೆನ್ನುವ ವೀಡಿಯೋ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ–  ಆಟವಾಡುತ್ತ ಆಡುತ್ತ ಬಂದ ಬಾಲಕ ನಾಗರ ಹಾವಿನ ಬಾಲಕ್ಕೇ ಕೈ ಹಾಕಿದ ಭಯಾನಕ ಘಟನೆ ಬೆಳಗಾವಿಯಲ್ಲಿ ನಡೆದಿದೆ.

Home add -Advt

ಇಲ್ಲಿಯ ಕಂಗ್ರಾಳಿಯಲ್ಲಿ ತಂದೆಯೊಂದಿಗೆ ಹೊಲಕ್ಕೆ ಹೋದ ಹಾಲುಗಲ್ಲದ ಪುಟ್ಟ ಬಾಲಕನೋರ್ವ ಹೊಲದಲ್ಲೆಲ್ಲ ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತ ಓಡಾಡುತ್ತಿದ್ದ. ಇದನ್ನೆಲ್ಲ ಬಾಲಕನ ತಂದೆ ಮೊಬೈಲ್ ನಲ್ಲಿ ವೀಡಿಯೋ ಮಾಡುತ್ತಿದ್ದರು.

ಬಾಲಕನನ್ನು ಕರೆಯುತ್ತಲೇ, ಆತ ಪುಟ್ಟ ಪುಟ್ಟ  ಹೆಜ್ಜೆ ಹಾಕುತ್ತ ಬರುವುದನ್ನೇ ದೂರದಿಂದ ಚಿತ್ರೀಕರಿಸುತ್ತಿದ್ದ. ಬಾಲಕ ಬರುವಾಗ ಆತನಿಗೆ ನಾಗರಹಾವೊಂದು ಅಲ್ಲಿ ಮಲಗಿರುವುದು ಕಾಣಿಸುತ್ತದೆ. ತಕ್ಷಣ ಆತ ಅದರ ಬಾಲಕ್ಕೇ ಕೈ ಹಾಕಿದೆ. ಏಕಾ ಏಕಿ ಪುಟಿದೆದ್ದ ಹಾವು ಅಲ್ಲಿಂದ ಓಡಲು ಆರಂಭಿಸುತ್ತದೆ. ವೀಡಿಯೋ ಮಾಡುತ್ತಿದ್ದ ಬಾಲಕನ ತಂದೆ ಕಂಗಾಲಾಗಿ ಓಡಿಹೋಗಿ ಬಾಲಕನನ್ನು ಎತ್ತಿಕೊಳ್ಳುತ್ತಾನೆ.

ಅದೃಷ್ಟವಶಾತ್ ಹಾವು ಬಾಲಕನಿಗೆ ಏನನ್ನೂ ಮಾಡದೆ ತನ್ನಷ್ಟಕ್ಕೆ ತಾನು ಓಡಿಹೋಗುತ್ತದೆ. ಓಡಿ ಹೋಗುತ್ತಿರುವ ದೃಶ್ಯವನ್ನೂ ವೀಡಿಯೋ ಮಾಡಿದ್ದಾರೆ.

ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.

Related Articles

Back to top button