Kannada NewsLatest
ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ್ ಮಹಾರಾಷ್ಟ್ರಕ್ಕೆ ಸೇರಬೇಕು; ಮತ್ತೆ ಕಿಡಿಹೊತ್ತಿಸಿದ ಮಹಾ ಡಿಸಿಎಂ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಬೆಳಗಾವಿ, ನಿಪ್ಪಾಣಿ ಪ್ರದೇಶ ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು, ಮಹಾ ಡಿಸಿಎಂ ಅಜಿತ್ ಪವಾರ್ ಇಂತದ್ದೊಂದು ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರ ಸಂಸ್ಥಾಪನಾ ದಿನಾಚರಣೆ ಹಿನ್ನೆಲೆಯಲ್ಲಿ ಪುಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅಜಿತ್ ಪವಾರ್, ಕರ್ನಾಟಕದ ಗಡಿ ಭಾಗದಲ್ಲಿ ನೆಲೆಸಿರುವ ಕೆಲ ಸ್ಥಳಗಳಲ್ಲಿ ಜನರು ಸಂಪೂರ್ಣವಾಗಿ ಮರಾಠಿ ಮಾತನಾಡುತ್ತಾರೆ ಆ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿಸಬೇಕು. ಈ ಹೋರಾಟ ಹಲವು ವರ್ಷಗಳಿಂದ ನಡೆಯುತ್ತಿದೆ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದು ಹೇಳಿದರು.
ಮರಾಠಿ ಮಾತನಾಡುವ ಜನರಿರುವ ಬೀದರ್, ಭಾಲ್ಕಿ, ಬೆಳಗಾವಿ, ಕಾರವಾರ, ನಿಪ್ಪಾಣಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲು ಈವರೆಗೂ ಸಾಧ್ಯವಾಗಿಲ್ಲ. ಮರಾಠಿ ಮಾತನಾಡುವ ಈ ಶಳಗಳನ್ನು ಶೀಘ್ರದಲ್ಲೇ ಮಹಾರಾಷ್ಟ್ರಕ್ಕೆ ಸೇರಿಸಬೇಕು. ಈ ಹೋರಾಟಕ್ಕೆ ತೊಡಗಿದವರ ಬೆಂಬಲಕ್ಕೆ ನಾವಿದ್ದೇವೆ ಎಂದು ಹೇಳಿದ್ದಾರೆ.
ಆಟೋದಲ್ಲಿ ಬಂದು ಸಿಐಡಿಗೆ ಶರಣಾದ ಅಕ್ರಮದ ಕಿಂಗ್ ಪಿನ್ !