
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರಿನ ಪೇಂಟ್ ಫ್ಯಾಕ್ಟರಿಯಲ್ಲಿ ದುರಂತ ಸಂಭವಿಸಿದೆ. ಬಣ್ಣ ಬೆರೆಸುವ ಪೇಂಟ್ ಗ್ರೈಂಡರ್ ಗೆ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ಜಡೆ ಸಿಲುಕಿ ಆಕೆಯ ತಲೆಯೇ ಕಟ್ ಆಗಿರುವ ಘಟನೆ ಶ್ರೀ ಪೇಂಟರ್ಸ್ ಕಾರ್ಖಾನೆಯಲ್ಲಿ ನಡೆದಿದೆ.
ಬೆಂಗಳೂರಿನ ನೆಲಗದರನಹಳ್ಳಿಯಲ್ಲಿರುವ ಶ್ರೀಪೇಂಟ್ಸ್ ಕಾರ್ಖಾನೆಯಲ್ಲಿ ಈ ಅನಾಹುತ ಸಂಭವಿಸಿದೆ. ಮಲ್ಲತ್ತಹಳ್ಳಿಯ 33 ವರ್ಷದ ಶ್ವೇತಾ ಮೃತ ಮಹಿಳೆ.
ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಪೇಂಟ್ ಬೆರೆಸುವ ಗ್ರೈಂಡರ್ ಗೆ ಆಕಸ್ಮಿಕವಾಗಿ ಮಹಿಳೆಯ ಜಡೆ ಸಿಲುಕಿಕೊಂಡಿದೆ. ಮಹಿಳೆ ಕೂಗಿಕೊಂಡಿದ್ದಾರೆ ಆದರೂ ಅವರನ್ನು ಬಚಾವ್ ಮಾಡಲು ಸಾಧ್ಯವಾಗಿಲ್ಲ. ಉಳಿದ ಕೆಲಸಗಾರರು ಬರುವಷ್ಟರಲ್ಲಿ ಮಹಿಳೆ ತಲೆ ಗ್ರೈಂಡರ್ ಗೆ ಸಿಲುಕಿ ಕಟ್ ಆಗಿದೆ.
ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕಾಗಮಿಸಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.