Latest

ಇಂದೇ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ಮತದಾನ ; ಅವಿಶ್ವಾಸ ನಿರ್ಣಯವನ್ನೂ ಒಪ್ಪಿಕೊಳ್ಳಲ್ಲ ಎಂಬ ಭಂಡ ಹೇಳಿಕೆ

ಅಧಿಕಾರ ಕಳೆದುಕೊಳ್ಳುವ ಭೀತಿಯಲ್ಲಿ ಇಮ್ರಾನ್ ಖಾನ್

ಪ್ರಗತಿವಾಹಿನಿ ಸುದ್ದಿ; ಇಸ್ಲಾಮಾಬಾದ್; ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅಧಿಕಾರದ ದಾಹ ಮಿತಿ ಮೀರಿದಂತೆ ವರ್ತಿಸುತ್ತ ಹುಚ್ಚು ಹೇಳಿಕೆಗಳನ್ನು ನೀಡುತ್ತಿದ್ದು ಇದೀಗ ಅವಿಶ್ವಾಸ ಮತದಾನವನ್ನೂ ಒಪ್ಪಿಕೊಳ್ಳುವುದಿಲ್ಲ ಎಂಬ ನಾಚಿಕೆಗೇಡಿನ ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆ ಪಾಕಿಸ್ತಾನದ ಡೆಮಾಕ್ರಸಿಯನ್ನೇ ನಾಚಿಸುವಂತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ಟೀಕಿಸಿವೆ.

ಇಮ್ರಾನ್ ಖಾನ್ ಅವರ ನೇತೃತ್ವದ ಮೇಲೆ ಪಾಕಿಸ್ತಾನ ಸರಕಾರ ವಿಶ್ವಾಸ ಕಳೆದುಕೊಂಡಿದ್ದು ಇಂದು ಅವಿಶ್ವಾಸ ಮತದಾನ ನಡೆಯಲಿದೆ. ಈ ವಿದ್ಯಮಾನ ನಡೆದಾಗಿಂದಲೂ ಪಾಕ್ ಪ್ರಧಾನಿ ಮೈಮೇಲೆ ಇರುವೆ ಬಿಟ್ಟುಕೊಂಡಂತೆ ಆಡುತ್ತಿದ್ದಾರೆ.

ತನ್ನನ್ನು ಪ್ರಧಾನಿ ಪಟ್ಟದಿಂದ ಕೆಳಗಿಳಿಸುವಲ್ಲಿ ವಿದೇಶಿ ಶಕ್ತಿಗಳ ಹುನ್ನಾರವಿದೆ ಎಂದು ಇಮ್ರಾಖಾನ್ ಆರೋಪಿಸುತ್ತಲೇ ಇದ್ದಾರೆ. ಮೊದಲು ಭಾರತದತ್ತ ಬೊಟ್ಟು ಮಾಡಿದ್ದ ಅವರು ಬಳಿಕ ತನ್ನ ಪದಚ್ಯುತಿಯಲ್ಲಿ ಅಮೇರಿಕದ ಕೈವಾಡವಿದೆ ಎಂದು ನೇರವಾಗಿ ಹೇಳಿದ್ದರು. ಅಮೇರಿಕದ ವಿದೇಶಾಂಗ ಸಚೀವಾಲಯ ಇಮ್ರಾನ್ ಖಾನ್‌ರ ಆರೋಪವನ್ನು ತಳ್ಳಿ ಹಾಕಿದೆ.

ಇನ್ನು ಇಮ್ರಾನ್ ಖಾನ್ ಅವಿಶ್ವಾಸ ನಿರ್ಣಯ ಮಾಡಿ ತನನ್ನು ಪ್ರಧಾನಿ ಪಟ್ಟದಿಂದ ಕೆಳಗಿಳಿಸುವ ವಿದೇಶಿ ಹುನ್ನಾರದ ವಿರುದ್ಧ ದೇಶದ ಯುವಕರು ಪ್ರತಿಭಟನೆ ನಡೆಸಬೇಕು ಎಂದೂ ಕರೆ ನೀಡಿದ್ದಾರೆ. ಯುವಕರು ಎಚ್ಚೆತ್ತುಕೊಳ್ಳಬೇಕು, ಇದನ್ನು ಹೀಗೆಯೇ ಬಿಟ್ಟರೆ ದೇಶದ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ಇಮ್ರಾನ್ ಖಾನ್ ಯುವಜನತೆಯನ್ನುದ್ದೇಶಿಸಿ ಹೇಳಿಕೆ ನೀಡಿದ್ದಾರೆ.

ಇನ್ನೊಂದೆಡೆ ಪಾಕಿಸ್ತಾನ ಆಂತರಿಕ ಭದ್ರತಾ ಸಚಿವ ಶೇಖ್ ರಶೀದ್ ಹೇಳಿಕೆ ನೀಡಿದ್ದು ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ಸಾಬೀತಾದರೂ ಅವರು ಮುಂದಿನ ಪ್ರಧಾನಮಂತ್ರಿಯ ಆಯ್ಕೆಯಾಗುವವರೆಗೆ ಪ್ರಧಾನಿಯಾಗಿಯೇ ಮುಂದುವರೆಯಲಿದ್ದಾರೆ ಎಂದಿದ್ದಾರೆ. ಇದು ಇಮ್ರಾನ್ ಖಾನ್ ವಿಶ್ವಾಸ ಮತ ಸಾಬೀತುಪಡಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಬಹುತೇಕ ಖಚಿತಪಡಿಸಿದೆ.

ಒಟ್ಟು ೩೪೨ ಸ್ಥಾನಗಳಲ್ಲಿ ವಿಶ್ವಾಸ ಮತ ಸಾಬೀತುಪಡಿಸಲು ಖಾನ್‌ಗೆ ೧೭೨ ಮತಗಳು ಬೇಕಿದೆ. ವಿಚಿತ್ರವೆಂದರೆ ಪಾಕಿಸ್ತಾನದಲ್ಲಿ ಈವರೆಗೂ ಯಾವುದೇ ಪ್ರಧಾನಮಂತ್ರಿ ೫ ವರ್ಷದ ಅವಧಿಯನ್ನು ಪೂರ್ಣಗೊಳಿಸಿಲ್ಲ. ಅಲ್ಲದೇ ಅವಿಶ್ವಾಸ ನಿರ್ಣಯಕ್ಕೆ ಒಳಪಟ್ಟ ಪಾಕಿಸ್ತಾನದ ಮೂರನೇ ಪ್ರಧಾನಿ ಇಮ್ರಾನ್ ಖಾನ್ ಆಗಿದ್ದು ಈ ಹಿಂದಿನ ಎರಡು ಪ್ರಧಾನಿಗಳು ಸಹ ವಿಶ್ವಾಸ ಮತ ಸಾಬೀತು ಮಾಡಲು ಸಾಧ್ಯವಾಗಿರಲಿಲ್ಲ.

ಆಮ್ ಆದ್ಮಿ ಪಕ್ಷ ಸೇರ್ಪಡೆಗೆ ಭಾಸ್ಕರ್ ರಾವ್ ನಿರ್ಧಾರ: ಕೇಜ್ರಿವಾಲ್ ಸಮ್ಮುಖದಲ್ಲಿ ನಾಳೆಯೇ ಆಪ್ ಗೆ ಸೇರ್ಪಡೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button