Latest

*ಭಾರತೀಯ ಹೈಕಮಿಷನ್ ಸಿಬ್ಬಂದಿಯನ್ನು ಪರ್ಸನಾ ನಾನ್ ಗ್ರಾಟಾ ಎಂದು ಘೋಷಿಸಿದ ಪಾಕಿಸ್ತಾನ*

ಪ್ರಗತಿವಾಹಿನಿ ಸುದ್ದಿ: ಭಾರತದಲ್ಲಿರುವ ಪಾಕಿಸ್ತಾನದ ಹೈಕಮಿಷನ್ ಅಧಿಕಾರಿಗೆ ಕೇಂದ್ರ ಸರ್ಕಾರ ‘ಪರ್ಸನಾ ನಾನ್ ಗ್ರಾಟಾ’ ಘೋಷಣೆ ಸೂಚನೆ ನೀಡಲು ನಿರ್ಧರಿಸಿದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನವು ಇಸ್ಲಾಮಾ ಬಾದ್ ನಲ್ಲಿರುವ ಭಾರತೀಯ ಹೈಕಮಿಷನ್ ಸಿಬ್ಬಂದಿಯನ್ನು ಪರ್ಸಾನಾ ನಾನ್ ಗ್ರಾಟಾ ಎಂದು ಘೋಷಿಸಿದೆ.

ಇದು ಅವರ ಅಧಿಕೃತ ಸ್ಥಾನಮಾನಕ್ಕೆ ಹೊಂದಿಕೆಯಾಗದ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದನ್ನು ಉಲ್ಲೇಖಿಸಿದೆ. ಪಾಕಿಸ್ತಾನ ತನ್ನ ನಿರ್ಧಾರ ತಿಳಿಸಿ ಸಂಬಂಧ ಪಟ್ಟ ಅಧಿಕಾರಿ 24 ಗಂಟೆಯೊಳಗೆ ದೇಶ ತೊರೆಯುವಂತೆ ನಿರ್ದೇಶಿಸಿದೆ.

Home add -Advt

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಾಕಿಸ್ತಾನದ ಅಧಿಕಾರಿ ಭಾರತದಲ್ಲಿನ ಬೇಡದ ಚಟುವಟಿಕೆಗಳಲ್ಲಿ ತೊಡಗಿದ್ದಕ್ಕಾಗಿ ಭಾರತ ಸರ್ಕಾರ ಅವರನ್ನು ಗ್ರಾನಾ ನಾನ್ ಗ್ರಾಟಾ ಎಂದು ಘೋಷಣೆ ಮಾಡಿದೆ.

ಹೀಗಾಗಿ ಈ ಅಧಿಕಾರಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಮುಂದಿನ 24 ಗಂಟೆಗಳ ಒಳಗೆ ಭಾರತವನ್ನು ತೊರೆಯಬೇಕು ಎಂದು ನೇರವಾಗಿ ಸೂಚಿಸಲಾಗಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಕೂಡ ಭಾರತದ ಹೈಕಮಿಷನ್ ಸಿಬ್ಬಂದಿಗಳಿಗೆ ಈ ಸೂಚನೆ ನೀಡಿದೆ

Related Articles

Back to top button