Latest

ಓರ್ವ ಮೀನುಗಾರನ ಹತ್ಯೆ; 6 ಜನರನ್ನು ಅಪಹರಿಸಿದ ಪಾಕಿಸ್ತಾನಿ ನೌಕಾಪಡೆ

ಪ್ರಗತಿವಾಹಿನಿ ಸುದ್ದಿ; ಅಹಮದಾಬಾದ್: ಗುಜರಾತ್ ಕರಾವಳಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದವರ ಮೇಲೆ ದಾಳಿ ನಡೆಸಿದ ಪಾಕಿಸ್ತಾನ ನೌಕಾ ಪಡೆ, ಓರ್ವ ಮೀನುಗಾರನನ್ನು ಹತ್ಯೆಗೈದಿದ್ದು 6 ಜನರನ್ನು ಅಪಹರಿಸಿರುವ ಘಟನೆ ದ್ವಾರಕಾದ ಓಖಾ ಪಟ್ಟಣದಲ್ಲಿ ನಡೆದಿದೆ.

ಓಖಾ ಪಟ್ಟಣದ ಬಳಿ ಜಲ್ ಪರಿ ಎಂಬ ಹೆಸರಿನ ಬೋಟ್ ಮೇಲೆ ದಾಳಿ ನಡೆಸಿದ ಪಾಕಿಸ್ತಾನದ ನೌಕಾಪಡೆ ಗುಂಡಿನ ದಾಳಿ ನಡೆಸಿತ್ತು. ಗುಂಡಿನ ದಾಳಿಯಲ್ಲಿ ಓರ್ವ ಮೀನುಗಾರ ಸಾವನ್ನಪ್ಪಿದ್ದು, ಮೃತ ವ್ಯಕ್ತಿಯನ್ನು ಶ್ರೀಧರ ಎಂದು ಗುರುತಿಸಲಾಗಿದೆ.

Home add -Advt

ಇದೇ ವೇಳೆ 6 ಮೀನುಗಾರರನ್ನು ಅಪಹರಿಸಿದ್ದಾರೆ ಎಂದು ತಿಳಿದುಬಂದಿದೆ. ಬೋಟ್ ನಲ್ಲಿ ಒಟ್ಟು 7 ಮೀನುಗಾರರು ಇದ್ದರು. ಓರ್ವ ಮೀನುಗಾರ ಗುಂಡಿನ ದಾಳಿಯಲ್ಲಿ ಗಂಭಿರವಾಗಿ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ.

ಮಾಜಿ ಗೃಹ ಸಚಿವರ ಇಡಿ ಕಸ್ಟಡಿ ವಿಸ್ತರಣೆ; ಸಿಬಿಐನಿಂದಲೂ ಎದುರಾಯ್ತು ಸಂಕಷ್ಟ

ಮತ್ತೆ ಎದುರಾದ 2015ರ ಪ್ರವಾಹ ಭೀತಿ; ಮಹಾ ಮಳೆಗೆ ಚೆನ್ನೈ ಜಲಾವೃತ; ರೆಡ್ ಅಲರ್ಟ್ ಘೋಷಣೆ

Related Articles

Back to top button