ಪ್ರಗತಿವಾಹಿನಿ ಸುದ್ದಿ; ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಪೆಟ್ರೋಲ್ ದರ ಲೀಟರ್ ಗೆ 30 ರೂಪಾಯಿ ದಿಢೀರ್ ಏರಿಕೆಯಾಗಿದ್ದು, ಈ ಮೂಲಕ ಲೀಟರ್ ಪೆಟ್ರೋಲ್ ದರ 180 ರೂ ತಲುಪಿದೆ.
ಡೀಸೆಲ್ ಲೀಟರ್ ಗೆ 174.15 ರೂಪಾಯಿ ತಲುಪಿದ್ದು, ಸೀಮೆ ಎಣ್ಣೆ ಲೀಟರ್ ಗೆ 155.56 ರೂ, ಲೈಡ್ ಡೀಸೆಲ್ ಲೀಟರ್ ಗೆ 148.31 ರೂ ಆಗಿದೆ.
ಈ ಮಧ್ಯೆ ಕತಾರ್ ನಲ್ಲಿ ಇಮ್ತರ್ ನ್ಯಾಷನಲ್ ಮಾನಿಟರಿ ಫಂಡ್ (ಐಎಂಎಫ್) ಹಾಗೂ ಪಾಕಿಸ್ತಾನ ಸರ್ಕಾರದ ನಡುವೆ ಬೇಲ್ ಔಟ್ ಮಾತುಕತೆ ವಿಫಲವಾಗಿದೆ. 600 ಕೋಟಿ ಡಾಲರ್ ಪುನಶ್ಚೇತನ ಪ್ಯಾಕೇಜ್ ಇದಾಗಿತ್ತು. ಈ ಯೋಜನೆ ನನಸು ಮಾಡುವ ಸಲುವಾಗಿಯೇ ಪೆಟ್ರೋಲ್ ದರ ಏರಿಸಲಾಗಿದೆ ಎಂದು ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ತಿಳಿಸಿದ್ದಾರೆ.
ರಾಜ್ಯದ ಮೂವರಿಗೆ ಐಎಎಸ್ ಕನ್ಫರ್ಮ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ