ಪ್ರಗತಿವಾಹಿನಿ ಸುದ್ದಿ, ಕರಾಚಿ: ಸಹ ಆಟಗಾರನ ಪ್ರೇಯಸಿ ಜೊತೆಗೆ ಸೆಕ್ಸಿ ಚಾಟ್ ಮಾಡಿ ಪಾಕ್ ಕ್ರಿಕೆಟಿಗ ಬಾಬರ್ ಅಝಂ ಜಾಲತಾಣದ ಶಿಕಾರಿಯಾಗಿದ್ದಾರೆ.
ಬಾಬರ್ ಅಝಂ ಆಕೆಯ ಜತೆ ವಿಡಿಯೊ ಕಾಲ್ ಮಾಡಿ ಮಾತನಾಡುವ ಹಾಗೂ ಸಂದೇಶಗಳನ್ನು ಕಳುಹಿಸುತ್ತಿರುವ ವಿಡಿಯೊ ಸಖತ್ ವೈರಲ್ ಆಗಿದೆ. ವಿಡಿಯೊದಲ್ಲಿರುವ ಮಹಿಳೆ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರನೊಬ್ಬನ ಪ್ರೇಯಸಿ ಎಂದು ಹೇಳಲಾಗಿದೆ.
ಹಾಸಿಗೆ ಮೇಲೆ ಮಲಗಿರುವ ಬಾಬರ್ ಅಝಂ, ತಮ್ಮ ಜತೆ ಚಾಟ್ ಮಾಡುವಂತೆ ಯುವತಿಗೆ ಒತ್ತಾಯಿಸುತ್ತಿದ್ದಾರೆ. ಅಲ್ಲದೆ, ವಿಡಿಯೊ ಕಾಲ್ ಮಾಡಿದರೆ, ನಿನ್ನ ಗೆಳೆಯ ಪಾಕಿಸ್ತಾನ ತಂಡದಲ್ಲಿ ಸದಾ ಸ್ಥಾನ ಪಡೆಯುವಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡುತ್ತಿರುವುದು ಕಂಡುಬಂದಿದೆ.
ಬಾಬರ್ ಅಝಂ ವಿಡಿಯೊ ಪಾಕಿಸ್ತಾನದಲ್ಲಿ ಸಂಚಲನ ಮೂಡಿಸಿದೆ. ಸಾಕಷ್ಟು ಮಂದಿ ಅದನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡು ಟೀಕಿಸಿದ್ದಾರೆ.
ಸುಳ್ಳು ಆರೋಪ:
ಬಾಬರ್ ಅಝಂ ಅಭಿಮಾನಿಗಳು ಇದೊಂದು ಸುಳ್ಳು ಆರೋಪ ಎಂದಿದ್ದು ಇದನ್ನು ವೈರಲ್ ಮಾಡಿದವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಾಬರ್ ವಿರುದ್ಧ ಸೇಡು ತೀರಿಸಿಕೊಂಡು ಅವರ ತೇಜೋವಧೆಗಾಗಿ ನಕಲಿ ವಿಡಿಯೊ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಈ ನಡುವೆ ಕಳೆದ ವರ್ಷ ಬಾಬರ್ ಅಝಂ ವಿರುದ್ಧ ಹಮಿಜಾ ಮುಖ್ತಾರ್ ಎಂಬ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಮತ್ತೆ ಮುನ್ನೆಲೆಗೆ ಬಂದಿದೆ. ನಾಯಕತ್ವದ ವೈಫಲ್ಯಗಳ ಮಧ್ಯೆ ಈ ವಿದ್ಯಮಾನಗಳು ಬಾಬರ್ ಅಝಂ
ತಂದೆಯ ಸಾಲಕ್ಕೆ ಮಗನೂ ಬಾಧ್ಯಸ್ಥ: ಮರು ಪಾವತಿಗೆ ಹೈಕೋರ್ಟ್ ಆದೇಶ
https://pragati.taskdun.com/son-also-liable-for-fathers-debt-high-court-orders-repayment/
*ನಮ್ಮಂತವರಿಗೆ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದ ಗೃಹ ಸಚಿವ ಅರಗ ಜ್ಞಾನೇಂದ್ರ*
https://pragati.taskdun.com/home-minister-raga-jnanendrareactionh-d-kumaraswamycongress/
*ನೋಡ ನೋಡುತ್ತಿದ್ದಂತೆ ರಸ್ತೆ ಮಧ್ಯೆಯೇ ಹೊತ್ತಿ ಉರಿದ ಸಿಮೆಂಟ್ ಲಾರಿ*
https://pragati.taskdun.com/lorryfire-accidentnational-highway-66/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ