ಪ್ರಗತಿವಾಹಿನಿ ಸುದ್ದಿ, ಕರಾಚಿ: ಬಲೆಗೆ ಬಿದ್ದ ಭಾರೀ ಅಪರೂಪದ ಮೀನೊಂದು ಮೀನುಗಾರನಿಗೆ ಬೆಳಗಾಗುವುದರೊಳಗೆ ಕೋಟ್ಯಾಧಿಪತಿಯಾಗಿಸಿದೆ.
ಈ ಘಟನೆ ನಡೆದಿರುವುದು ಪಾಕಿಸ್ತಾನದ ಕರಾಚಿ ನಗರದಲ್ಲಿ. ಮೀನುಗಾರ ಹಾಜಿ ಬಲೋಚ್ ಕೋಟಿ ಗಳಿಸಿದ ಅದೃಷ್ಟವಂತ. ಈತ ಕಡಲ ತೀರದಲ್ಲಿರುವ ಇಬ್ರಾಹಿಂ ಹೈದರಿ ಎಂಬ ಹಳ್ಳಿಯಲ್ಲಿದ್ದು, ಪ್ರತಿ ದಿನ ಮೀನುಗಾರಿಕೆ ಮಾಡುತ್ತಿದ್ದ
ಕಳೆದ ಸೋಮವಾರ ಈತ ಬೀಸಿದ ಬಲೆಗೆ ಗೋಲ್ಡನ್ ಫಿಶ್ (ಸೋವಾ) ಮೀನು ಬಿತ್ತು. ಅರಬ್ಬಿ ಸಮುದ್ರದಲ್ಲಿ ಅತ್ಯಂತ ಅಪರೂಪದ ಹಾಗೂ ಔಷಧೀಯ ಗುಣಗಳನ್ನು ಹೊಂದಿರುವ ಮೀನು ಇದಾಗಿದ್ದು ಇದು ಸಿಕ್ಕಿದೆ ಎಂಬ ಮಾಹಿತಿ ತಿಳಿದಿದ್ದೇ ತಡ, ಅದರ ಖರೀದಿಗೆ ಜನ ಮುಗಿಬಿದ್ದರು.
ಭಾರೀ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಕರಾಚಿ ಬಂದರಿನಲ್ಲಿ ಮೀನನ್ನು ಶುಕ್ರವಾರ ಹರಾಜಿಗಿಟ್ಟ ಹಾಜಿ ಬಲೋಚ್ ಗೆ ಬರೊಬ್ಬರಿ 7 ಕೋಟಿ ರೂ. ದರ ಬಂತು.
ದಶಕಗಳಿಂದ ಮೀನುಗಾರಿಕೆ ಮಾಡುತ್ತಿದ್ದರೂ ಇಂಥ ಅದೃಷ್ಟ ಜೀವನದಲ್ಲಿ ಮೊದಲ ಬಾರಿಗೆ ಬಂದಿದೆ ಎಂದು ಹಾಜಿ ಬಲೋಚ್ ಹೇಳಿಕೊಂಡಿದ್ದಾನೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ