Latest

ಭಾರತೀಯರನ್ನು ಕಂಡರೆ ಪಾಕಿಸ್ತಾನದವರಿಗೆ ತುಂಬಾ ಪ್ರೀತಿ

ಭಾರತೀಯರನ್ನು ಕಂಡರೆ ಪಾಕಿಸ್ತಾನದವರಿಗೆ ಪ್ರೀತಿ

ಪ್ರಗತಿವಾಹಿನಿ ಸುದ್ದಿ, ಮುಂಬೈ – ಪಾಕಿಸ್ತಾನದ ಜನರು ನಿಜವಾಗಿ ಕೆಟ್ಟವರಲ್ಲ. ಅವರಲ್ಲಿ ಒಳ್ಳೆಯ ಗುಣಗಳಿವೆ. ಭಾರತೀಯರನ್ನು ಕಂಡರೆ ಅವರಿಗೆ ಪ್ರೀತಿ ಇದೆ. ಭಾರತದ ಜನರನ್ನು ತಮ್ಮ ಬಂಧುಗಳೆಂದುಕೊಳ್ಳುತ್ತಾರೆ -ಹೀಗೆಂದು ಪಾಕಿಸ್ತಾನೀಯರನ್ನು ಹಾಡಿಹೊಗಳಿದವರು ರಾಷ್ಟ್ರವಾದಿ ಕಾಂಗ್ರೆಸ್ ನಾಯಕ ಶರದ್ ಪವಾರ್.

ಪಾಕಿಸ್ತಾನದವರು ಬಹಳ ಒಳ್ಳೆಯವರು. ಅಲ್ಲಿರುವ ಜನರು ಸುಖ ಸಂತೋಷದಿಂದ ಬದುಕಿದ್ದಾರೆ. ಕೇಂದ್ರದ ಬಿಜೆಪಿ ಸರಕಾರ ಅನಗತ್ಯವಾಗಿ ಪಾಕಿಸ್ತಾನದ ಕುರಿತು ಅಪಪ್ರಚಾರ ಮಾಡುತ್ತಿದೆ. ಅಲ್ಲಿಯವರು ಕಷ್ಟದಿಂದ ಬದುಕುತ್ತಿದ್ದಾರೆ ಎನ್ನುವಂತೆ ಬಿಂಬಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ನಾನು ಸಾಕಷ್ಟು ಬಾರಿ ಪಾಕಿಸ್ತಾಕ್ಕೆ ಹೋಗಿದ್ದೆ. ಅವರು ಬಹಳ ಪ್ರೀತಿಯಿಂದ ಕಂಡಿದ್ದಾರೆ. ಕೇವಲ ರಾಜಕೀಯ ಲಾಭಕ್ಕಾಗಿ ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತಿದೆ. ಪುಲ್ವಾಮಾ ದಾಳಿ, ಭಾರತದ ಮರುದಾಳಿಗಳಿಂದಾಗಿ ಭಾರತ, ಪಾಕಿಸ್ತಾನದ ಸಂಬಂಧ ಹದಗೆಟ್ಟಿದೆ ಎಂದೂ ಪವಾರ್ ಹೇಳಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button