ಬಾಲಿವುಡ್ ನಟ ಗೋವಿಂದಾ ಪಾದಕ್ಕೆ ಬಿದ್ದ ಪಾಕಿಸ್ತಾನಿ ನಟ

ಪ್ರಗತಿ ವಾಹಿನಿ ಸುದ್ದಿ, ದುಬೈ:
ಇತ್ತೀಚೆಗೆ ದುಬೈನಲ್ಲಿ ನಡೆದ ಫಿಲಂ ಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಕಿಸ್ತಾನಿ ನಟ ಫಹಾದ್ ಮುಸ್ತಫಾ ಅವರು ಬಾಲಿವುಡ್‍ನ ಖ್ಯಾತ ನಟ ಗೋವಿಂದಾ ಅವರ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಏಷ್ಯಾ ರಾಷ್ಟ್ರಗಳ ಫಿಲಂ ಫೇರ್ ಪ್ರಶಸ್ತಿ ಪ್ರದಾನ ಸಮಾರಂಭ ದುಬೈದಲ್ಲಿ ಆಯೋಜನೆಗೊಂಡಿತ್ತು. ಈ ವೇಳೆ ಗೋವಿಂದಾ ಕುಳಿತಲ್ಲಿಗೆ ಬಂದ ಫಹಾದ್ ಮುಸ್ತಫಾ, ಏಕಾಏಕಿ ಗೋವಿಂದಾ ಕಾಲು ಮುಟ್ಟಿ ನಮಸ್ಕರಿಸಿದ್ದಾರೆ. ತಾನು ನಟನೆ ಶುರು ಮಾಡಿದ್ದೇ ಗೋವಿಂದಾ ಅವರ ನಟನೆ ನೋಡಿ ಎಂದು ಫಹಾದ್ ಮುಸ್ತಫಾ ಹೇಳಿದ್ದಾರೆ.

Home add -Advt

ಗೋವಿಂದಾ ಉದ್ದೇಶಿಸಿ ಮಾತನಾಡಿದ ಫಹಾದ್, ಸರ್ ನಾವು ಪಾಕಿಸ್ತಾನದಲ್ಲಿ ಒಂದು ಸಮಯ ನಟನೆ ಮಾಡುವುದಿದ್ದರೆ ನಿಮ್ಮ ತರಹವೇ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದಿದ್ದೆವು ಎಂದು ಹೇಳಿದ್ದಾರೆ. ಈ ವೇಳೆ ಗೋವಿಂದಾ ಮತ್ತು ನಟ ರಣಬೀರ್ ಸಿಂಗ್ ಕೂಡ ಫಹಾದ್ ಅವರನ್ನು ಆಲಂಗಿಸಿ ಅಭಿನಂದಿಸಿದ್ದಾರೆ.

ತಂದೆಯಿಂದಲೇ 21 ವರ್ಷದ ಮಗಳ ಹತ್ಯೆ

https://pragati.taskdun.com/21-year-old-daughter-killed-by-her-father/

Related Articles

Back to top button