*ಮುರಗೇಶ್ ನಿರಾಣಿಗೆ ವಾರ್ನಿಂಗ್ ನೀಡಿದ ಪಂಚಮಸಾಲಿ ಲಿಂಗಾಯತ ಮುಖಂಡರು*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿಲ್ಲ ಎಂದು ಹೇಳಿಕೆ ನೀಡಿದ ಮಾಜಿ ಸಚಿವ ಮುರಗೇಶ್ ನಿರಾಣಿ ವಿರುದ್ಧ ಗರಂ ಆಗಿರುವ ಪಂಚಮಸಾಲಿ ಮುಖಂಡರು ನಿರಾಣಿಗೆ ವಾರ್ನಿಂಗ್ ನೀಡಿದ್ದಾರೆ.
ಇಂದು ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ನಿರಾಣಿ ಹೇಳಿಕೆ ಖಂಡಿಸಿ, ಮಾಧ್ಯಮಗೋಷ್ಠಿ ನಡೆಸಿದ ಗೌರವ ಅಧ್ಯಕ್ಷ ಆರ್‌ಕೆ ಪಾಟೀಲ್ ಆವರು ಮಾತನಾಡಿದ್ದಾರೆ.
ಮೀಸಲಾತಿ ಹೋರಾಟದಲ್ಲಿ ಹೆಬ್ಬಾಳ್ಕರ್ ಕುಟುಂಬ ಭಾಗಿಯಾಗಿದೆ. ನೀವು ಅಧಿಕಾರದಲ್ಲಿದ್ದಾಗ ನಮ್ಮ ಹೋರಾಟಕ್ಕೆ ವಿರೋಧ ಮಾಡಿದ್ದೀರಿ. ಅಧಿಕಾರಕ್ಕಾಗಿ ನಮ್ಮ ಸಮಾಜ ಒಡೆದ ಶ್ರೇಯಸ್ಸು ನಿಮಗೆ ಸಲ್ಲುತ್ತೆ. ಚನ್ನಮ್ಮ ಆಸ್ಥಾನದಲ್ಲಿ ಮಲ್ಲಪ್ಪ ಶೆಟ್ಟಿ ಇದ್ರು. ಈಗ ಸಮಾಜ ವಿರೋಧಿ ಕೆಲಸ ಮಾಡುತ್ತಿದ್ದು, ಈಗಿನ ಮಲ್ಲಪ್ಪ ಶೆಟ್ಟಿ ಎಂದು, ನಿರಾಣಿ ಅವರನ್ನು ಮಲ್ಲಪ್ಪ ಶೆಟ್ಟಿಗೆ ಹೋಲಿಸಿದ್ದಾರೆ.
ಶ್ರೀಗಳಿಗೆ ಎನೇನೋ ದಾಖಲೆ ಇವೆ ಎಂದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದೀರಿ. ಶ್ರೀಗಳ ಬಗ್ಗೆ ಮಾತನಾಡಿದ್ರೇ ಸಮಾಜದಿಂದ ತಕ್ಕ ಪಾಠ ಕಲಿಸುತ್ತೇವೆ. ಗುರುಗಳ ಬಗ್ಗೆ ಬ್ಲ್ಯಾಕ್ ಮೇಲ್ ತಂತ್ರ ಅನುಸರಿಸಿದ್ರೆ, ಇದರ ಪರಿಣಾಮ ಎದುರಿಸಬೇಕಾಗುತ್ತದೆ. ಮೀಸಲಾತಿಗಾಗಿ ಶ್ರೀಗಳು ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಇಲ್ಲ ಸಲ್ಲದ ಜಾತಿ ವಿಷಯ ಎತ್ತಿ ಗೌರವಕ್ಕೆ ಧಕ್ಕೆ ತರುತ್ತಿದ್ದೀರಿ. ಪದೇ ಪದೇ ನಮ್ಮ ಸಮಾಜವನ್ನು ಎಳೆದು ತರಬೇಡಿ ಎಂದು ನಿರಾಣಿಗೆ ವಾರ್ನಿಂಗ್ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ