ಪ್ರಗತಿವಾಹಿನಿ ಸುದ್ದಿ; ಹಾವೇರಿ: ಮೀಸಲಾತಿ ವಿಚಾರದಲ್ಲಿ ಪಂಚಮಸಾಲಿ ಸಮುದಾಯಕ್ಕೆ ಅನ್ಯಾಯವಾಗಿದೆ. ನಮಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಮೇಲೆ ನಂಬಿಕೆ ಇಲ್ಲ. ಎಲ್ಲಾ ವಿಚಾರಗಳನ್ನು ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ತಿಳಿಸುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಳ್ ಗುಡುಗಿದ್ದಾರೆ.
ಹಾವೇರಿಯಲ್ಲಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗಾಗಿ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ಯತ್ನಾಳ್, ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಸಚಿವ ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದರು.
ಚುನಾವಣೆಯಲ್ಲಿ ನನ್ನನ್ನು ಸೋಲಿಸುವುದಾಗಿ ನಿರಾಣಿಯವರು ಪಣತೊಟ್ಟಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ. ಬೆದರಿಕೆ ಹಾಕುತ್ತಿದ್ದಾರೆ, ಇದ್ಯಾವುದಕ್ಕೂ ನಾನು ಹೆದರುವವನಲ್ಲ, ನಿನಗೆ ತಾಕತ್ತಿದ್ದರೆ ನನ್ನನ್ನು ಪಕ್ಷದಿಂದ ಹೊರಹಾಕು ಎಂದು ಸಚಿವರಿಗೆ ಸವಾಲು ಹಾಕಿದರು.
ನನಗೆ ಟಿಕೆಟ್ ಕೊಡೋದು ಸಿಎಂ ಬೊಮ್ಮಾಯಿ ಕೈಯಲ್ಲೂ ಇಲ್ಲ, ನನಗೆ ಟಿಕೆಟ್ ಕೊಡುವುದು ಹೈಕಮಾಂಡ್. ವರಿಷ್ಠರು ಟಿಕೆಟ್ ಕೊಟುದ್ದಾತೆ ಎಂಬ ವಿಶ್ವಾಸ ನನಗಿದೆ. ನಾನು ಗೆದ್ದು ಮತ್ತೆ ವಿಧಾನಸೌಧಕ್ಕೆ ಹೋಗೇ ಹೋಗುತ್ತೇನೆ ಎಂದು ಹೇಳಿದರು.
ಸಿಎಂ ಬೊಮ್ಮಾಯಿ ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ. ಎಲ್ಲಾ ವಿಚಾರಗಳನ್ನು ನಾವು ಕೇಂದ್ರದ ನಾಯಕರಿಗೆ, ಪ್ರಧಾನಿಯವರಿಗೆ ತಿಳಿಸುತ್ತೇವೆ. ಈ ಹಿಂದೆ ಸಿಎಂ ಬೊಮ್ಮಾಯಿ ಅವರು 2ಎ ಮೀಸಲಾತಿಗೆ ಕೇಂದ್ರದಿಂದ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದಿದ್ದರು. ಆದರೂ ಇವರು ಮೀಸಲಾತಿ ನೀಡದೇ ಇರುವುದು ಯಾಕೆ? ಒಂದು ವೇಳೆ ಕರ್ನಾಟಕದ ಜನ ಸ್ಟೇ ಕೊಟ್ರೆ 5 ವರ್ಷ ಇವರು ಅನುಭವಿಸಬೇಕಾಗುತ್ತೆ. ಈಗಾಗಲೇ ಕೆಲವರಿಗೆ ನಮ್ಮ ರಾಜ್ಯದ ಜನತೆ ಕೊಟ್ಟ ಸ್ಟೇ ಯಿಂದಾಗಿ ಪಂಚಾಯ್ತಿ ಸದಸ್ಯನೂ ಆಗದ ಪರಿಸ್ಥಿತಿ ಬಂದಿದೆ ಎಂಬುದು ನೆನಪಿರಲಿ ಎಂದು ಹೇಳುವ ಮೂಲಕ ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಸಿದ್ದೇಶ್ವರ ಸ್ವಾಮೀಜಿ ಕೊನೆಯ ದಿನಗಳಲ್ಲಿ ನನ್ನ ಬಳಿ ಒಂದು ಮಾತು ಹೇಳಿದ್ರು, ನಾನು ಇವುವರೆಗೂ ನಿಮ್ಮ ಹಾಗೇ ಧೈರ್ಯವಾಗಿ ಮಾತನಾಡುವ ರಾಜಕಾರಣಿಯನ್ನು ನೋಡಿಲ್ಲ ಎಂದಿದ್ದರು. ಅವರ ಮಾತು ಕೇಳಿ ಕಣ್ಣೀರು ಬಂದಿತ್ತು ಎಂದರು. ಇದೇ ವೇಳೆ ನಾನು ಕೂಡ ಬಿಜೆಪಿ ಕಟ್ಟಲು ಹೋರಾಟ ಮಾಡಿದ್ದೇನೆ. ಸಮ್ಮಿಶ್ರ ಸರ್ಕಾರ ತೆಗೆದು ಬಿಜೆಪಿ ಸರ್ಕಾರ ರಚನೆ ಮಾಡುವಾಗ ಸಚಿವ ಸ್ಥಾನ ತ್ಯಾಗಮಾಡಬೇಕು ಎಂದು ಯಡಿಯೂರಪ್ಪ ಮನವಿ ಮಾಡಿದ್ರು. ನಾನು ಅದಕ್ಕೆ ಒಪ್ಪಿಕೊಂಡು ಸಚಿವ ಸ್ಥಾನ ತ್ಯಾಗ ಮಾಡಿದೆ. ಅದರೆ ಮೀಸಲಾತಿ ಕೊಡಬೇಕು ಎಂದು ಅಂದೇ ಒತ್ತಾಯಿಸಿದ್ದೆ ಎಂದು ಹೇಳಿದರು.
*BREAKING NEWS: ಸ್ಯಾಂಟ್ರೋ ರವಿ ಅರೆಸ್ಟ್*
https://pragati.taskdun.com/santro-raviarrestedgujarat/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ