Belagavi NewsBelgaum NewsKannada NewsKarnataka NewsNationalPolitics

*ಲೋಕಸಭೆ ಚುನಾವಣೆ ಕಣಕ್ಕೆ ಪಂಚಮಸಾಲಿ ಸ್ವಾಮೀಜಿ?*

ಪ್ರಗತಿವಾಹಿನಿ ಸುದ್ದಿ: ಯತ್ನಾಳ್ ಹಾಗೂ ಸ್ವಾಮೀಜಿಯವರು ಸಂಸ್ಥಾಪಕ ಅಧ್ಯಕ್ಷರ ಬಗ್ಗೆ ಕೀಳುಮಟ್ಟದ ಪದ ಬಳಕೆ ಮಾಡುತ್ತಿದ್ದಾರೆ. ಹಂದಿ, ನಾಯಿ, ನರಿ ಎಂಬ ಮಾತನ್ನು ಆಡಿದ್ದು, ಅವರ ಸಂಸ್ಕೃತಿ ತೋರಿಸುತ್ತದೆ. ಅಂತವರ ಬೆಂಬಲಕ್ಕೆ ತಮ್ಮ ವೈಯಕ್ತಿಕ ಹಿತಕ್ಕಾಗಿ ಸ್ವಾಮೀಜಿ ಬೆಂಬಲ ನೀಡುತ್ತಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾವಿ ಬಿಚ್ಚಿಟ್ಟು ಖಾದಿ ತೊಟ್ಟು ಸ್ಪರ್ಧಿಸಲು ಸ್ವಾಮೀಜಿ ಮುಂದಾಗಿದ್ದಾರೆ ಎಂದು ಶಾಸಕ ವಿಜಯಾನಂದ ಕಾಶಪ್ಪನವ‌ರ್ ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬೆಂಬಲಕ್ಕೆ ನಿಂತಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧ ಮಾತನಾಡಿ ಕಾಶಪ್ಪನವ‌ರ್ ಅವರು, ಯತ್ನಾಳ್‌ ಜೊತೆ ಚುನಾವಣೆಗೆ ನಿಲ್ಲುವ ಪ್ಲಾನ್‌ನಲ್ಲಿ ಸ್ವಾಮೀಜಿ ಇದ್ದು ಆ ಕಾರಣಕ್ಕೆ ಫ್ರೀಡಂ ಪಾರ್ಕ್‌ನಲ್ಲಿ 2ಡಿ, 2ಸಿ ಡೀಲ್‌ಗಳು ನಡೆದಿವೆ ಎಂಬ ಆರೋಪವಿದೆ ಎಂದು ತಿವಿದರು. 

ಯತ್ನಾಳ್ ಉಚ್ಚಾಟನೆಯನ್ನು ರದ್ದು ಮಾಡಬೇಕು ಎಂದು ಸ್ವಾಮೀಜಿ ಒಂದು ಪಕ್ಷಕ್ಕೆ ಡೆಡ್‌ಲೈನ್ ನೀಡಿದ್ದು, ಇದು ಯತ್ನಾಳ್ ಮತ್ತು ಸ್ವಾಮೀಜಿ ನಡುವಿನ ಹೊಂದಾಣಿಕೆ ರಾಜಕೀಯ ತೋರಿಸುತ್ತದೆ ಎಂದರು.

ಇನ್ನು ದಾವಣಗೆರೆಯಲ್ಲಿ ಸ್ವಾಮೀಜಿ ವೈಯಕ್ತಿಕ ಮತ್ತು ಪ್ರತ್ಯೇಕ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದಾರೆ. ಆ ಮೂಲಕ ಕೋಟ್ಯಂತರ ರೂಪಾಯಿ ಆಸ್ತಿ ಗಣಿಸಿದ್ದಾರೆ ಎಂಬ ಆರೋಪವನ್ನೂ ಕಾಶಪ್ಪನವ‌ರ್ ಮಾಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button