ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪಂಚಮಸಾಲಿ ಸಮಾಜದವರು ಕಳೆದ 2 ವರ್ಷಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಇನ್ನು ಕೆಲವೇ ಕ್ಷಣಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಘೋಷಣೆ ಮಾಡಲಿದ್ದಾರೆ.
ಪ್ರಗತಿವಾಹಿನಿಗೆ ಶ್ವಾಸನೀಯ ಮೂಲಗಳಿಂದ ದೊರಕಿರುವ ಮಾಹಿತಿ ಪ್ರಕಾರ ಪಂಚಮಸಾಲಿಗಳಿಗೆ ಶೇ.4ರಷ್ಟು 2 ಎ ಮೀಸಲಾತಿ ಘೋಷಣೆಯಾಗಲಿದೆ. ಸಂಜೆ 5 ಗಂಟೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಭೆಯಲ್ಲಿ ಚರ್ಚಿಸಿದ ನಂತರ ಮುಖ್ಯಮಂತ್ರಿಗಳು ಹೊರಗೆ ಬಂದು ಮೀಸಲಾತಿ ಘೋಷಣೆ ಮಾಡಲಿದ್ದಾರೆ.
ಪಂಚಮಸಾಲಿ ಹೋರಾಟ ಸಮಿತಿ ಮುಖ್ಯಮಂತ್ರಿಗಳಿಗೆ ನೀಡಿರುವ ಗಡುವು ಇಂದೇ ಮುುಕ್ತಾಯವಾಗುತ್ತಿದೆ. ಬೆಳಗಾವಿ ಅಧಿವೇಶನವೂ ಇಂದೇ ಮುಕ್ತಾಯವಾಗಿದೆ. ಮೀಸಲಾತಿ ಘೋಷಿಸದೆ ಸರಕಾರ ಬೆಳಗಾವಿಯಿಂದ ಕಾಲ್ಕೀಳುವ ಸಂಶಯ ಬಂದ ಹಿನ್ನೆಲೆಯಲ್ಲಿ ಪಂಚಮಸಾಲಿ ಮುಖಂಡರು ನಿನ್ನೆ ರಾತ್ರಿ ರಹಸ್ಯ ಸಭೆ ನಡೆಸಿದ್ದರು. ಮುಂದೆ ಗಂಭೀರ ಹೋರಾಟದ ಕುರಿತು ಚರ್ಚಿಸಿದ್ದರು.
ಪಂಜಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಮುಖಂಡರು ತೀವ್ರ ಹೋರಾಟ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಕೆರಳಿದ ಪಂಚಮಸಾಲಿ ಸಮಾಜ: ರಾತ್ರೋರಾತ್ರಿ ಮುಖಂಡರ ರಹಸ್ಯ ಸಭೆ: ಏನಾಗಲಿದೆ ಗುರುವಾರ?
https://pragati.taskdun.com/angry-panchmasali-comunity-secret-meeting-of-leaders-overnight-what-will-happen-on-thursday/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ