
ಪ್ರಗತಿವಾಹಿನಿ ಸುದ್ದಿ: ಮಹಾರಾಷ್ಟ್ರ ಸಚಿವೆ ಪಂಕಜಾ ಮುಂಡೆ ಆಪ್ತ ಸಹಾಯಕನ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೌರಿ ಪಾಳ್ವೆ ಆತ್ಮಹತ್ಯೆಗೆ ಶರಣಾದ ಮಹಿಳೆ. ಸಚಿವೆ ಪಂಕಜಾ ಮುಂಡೆ ಅವರ ಆಪ್ತಸಹಾಯಕ ಅನಂತ್ ಗರ್ಜೆ ಅವರ ಪತ್ನಿ.
ಈ ವರ್ಷದ ಫೆಬ್ರವರಿಯಲ್ಲಿ ಗೌರಿ ಹಾಗೂ ಅನಂತ್ ಗರ್ಜೆ ವಿವಾಹವಾಗಿತ್ತು. ಪಾಲಿಕೆ ನಡೆಸುವ ಕೆಐಎಂ ಆಸ್ಪತ್ರೆಯಲ್ಲಿ ದಂತ ವಿಭಾಗದಲ್ಲಿ ವೈದ್ಯೆಯಾಗಿದ್ದರು. ಕೌಟುಂಬಿಕ ಕಲಹದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.



