Kannada NewsLatest

ಬೆಳಗಾವಿ: ಜಿಲ್ಲಾಧಿಕಾರಿ ಕಚೇರಿ ಇನ್ಮುಂದೆ ಇ-ಆಫೀಸ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜಿಲ್ಲಾಧಿಕಾರಿ ಕಚೇರಿಯಲ್ಲಿ “ಕಾಗದ ರಹಿತ(ಪೇಪರ್ ಲೆಸ್)” ವ್ಯವಸ್ಥೆಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಆದೇಶ ನೀಡಿದ್ದಾರೆ.

ಕಾಗದ ರಹಿತ ಕಚೇರಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕಿದ್ದು, ಆ ಪ್ರಕಾರ ಜಿಲ್ಲಾಧಿಕಾರಿ ಕಚೇರಿಯನ್ನು ಇನ್ನು ಮುಂದೆ ಕಡ್ಡಾಯವಾಗಿ “ಕಾಗದ ರಹಿತ ಕಚೇರಿ” ಯಾಗಿ ಮಾರ್ಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಪೇಪರ್ ಲೆಸ್ ಕಚೇರಿಗೆ ಅಗತ್ಯವಿರುವ ಡಿ.ಎಸ್. ಕಾರ್ಡು, ಲ್ಯಾನ್ ವ್ಯವಸ್ಥೆಯನ್ನು ಒದಗಿಸಲಾಗಿದ್ದು, ಎಲ್ಲ ಶಾಖೆಗಳ ಸಿಬ್ಬಂದಿಗೆ ಅಗತ್ಯ ತರಬೇತಿಯನ್ನು ಕೂಡ ನೀಡಲಾಗಿದೆ.

ಕಾಗದರಹಿತ ಕಚೇರಿಯ ಆಶಯದಂತೆ‌ ಇನ್ನು ಮುಂದೆ ಜಿಲ್ಲಾಧಿಕಾರಿ ಕಚೇರಿಯ ಕಡತಗಳು ಮತ್ತು ಪತ್ರಗಳನ್ನು ಕಡ್ಡಾಯವಾಗಿ ಇದೇ ವ್ಯವಸ್ಥೆಯಡಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಎಲ್ಲ ಶಾಖೆಗಳ ಶಿರಸ್ತೆದಾರರು ಮತ್ತು ವಿಷಯ ನಿರ್ವಾಹಕರು ತರಬೇತಿಯಲ್ಲಿ ತಿಳಿಸಿರುವಂತೆ ಕಾಗದರಹಿತ ಕಚೇರಿ ವ್ಯವಸ್ಥೆಯನ್ನು ಚಾಚೂ ತಪ್ಪದೆ ಪಾಲಿಸಬೇಕು. ಎಲ್ಲ ಶಾಖೆಗಳ ಮುಖ್ಯಸ್ಥರು ತಮ್ಮ ಅಧೀನ ಸಿಬ್ಬಂದಿಗೆ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ತಿಳಿಸಿದ್ದಾರೆ.

ತಾಂತ್ರಿಕ ಸಲಹೆ-ನೆರವು ಅಗತ್ಯವಿದ್ದಲ್ಲಿ ಸಿಬ್ಬಂದಿಗೆ ನೆರವು ಒದಗಿಸಲು ತಾಂತ್ರಿಕ ಸಮಾಲೋಚಕರನ್ನು ಕೂಡ ನೇಮಿಸಲಾಗಿರುತ್ತದೆ. ಅಗತ್ಯವಿದ್ದರೆ ಇವರ ನೆರವು ಪಡೆದುಕೊಳ್ಳಬಹುದು.

ಕಾಗದರಹಿತ ಕಚೇರಿ(ಇ‌- ಆಫೀಸ್)ಈ ವ್ಯವಸ್ಥೆಯಡಿ ಕಾರ್ಯನಿರ್ವಹಿಸದೇ ಇರುವ ಸಿಬ್ಬಂದಿ ವಿರುದ್ಧ ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆಯನ್ನು ನೀಡಿದ್ದಾರೆ.

ಬೆಳಗಾವಿಯಲ್ಲಿರುವ 700 ಎಕರೆ ಜಮೀನು ಹಸ್ತಾಂತರಕ್ಕೆ ಕೇಂದ್ರ ರಕ್ಷಣಾ ಸಚಿವರ ಆಶ್ವಾಸನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button