Sports

*ಪ್ಯಾರಾ ಈಜು ಸ್ಪರ್ಧೆ: ಬಿಮ್ಸ್ ವಿದ್ಯಾರ್ಥಿನಿ ಪಂಕಜಾಗೆ ಚಿನ್ನದ ಪದಕ*

ಪ್ರಗತಿವಾಹಿನಿ ಸುದ್ದಿ: ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ  ದ್ವಿತೀಯ  ವರ್ಷದ ವಿದ್ಯಾರ್ಥಿನಿಯಾದ ಪಂಕಜಾ ರೇವಣಕರ ಅವರು  ರಾಜ್ಯ ಮಟ್ಟದ  ಪ್ಯಾರಾ ಈಜು ಚಾಂಪಿಯನ್‌ಷಿಪ್‌ ನಲ್ಲಿ  ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಪಡೆದುಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಫರಡೆರೇಷನ ಆಫ್‌ ಪ್ಯಾರಾ ಸ್ವಿಮ್ಮಿಂಗ್‌  ಇಂಡಿಯಾ ಅಡಿಯಲ್ಲಿ ಕರ್ನಾಟಕ   ಪ್ಯಾರಾ ಸ್ವಿಮ್ಮಿಂಗ್‌ ಅಸೋಸಿಯಷನ್‌  ಆಯೋಜಿಸಿದ್ಸ ರಾಜ್ಯಮಟ್ಟದ  ಪ್ಯಾರಾ ಈಜು ಚಾಂಪಿಯನ್‌ಶಿಪ್‌ ನಲ್ಲಿ   ಒಂದು  ಚಿನ್ನ ಹಾಗೂ  ಎರಡು ಬೆಳ್ಳಿ ಪದಕಗಳನ್ನು ಪಡೆದುಕೊಳ್ಳುವುದರ ಜತೆಗೆ  ರಾಷ್ಟ್ರೀಯ ಮಟ್ಟದ  ಈಜು ಸ್ಫರ್ಧೆಗೆ ಆಯ್ಕೆಯಾಗಿದ್ದಾರೆ.

Home add -Advt

ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಪಡೆದುಕೊಳ್ಳುವ ಮೂಲಕ ವಿಶೇಷವಾದ  ಸಾಮಥ್ಯವನ್ನು ಪ್ರದರ್ಶಿಸಿರುವ ಪಂಕಜಾ ಬಿಮ್ಸ್ ಗೆ ಕೀರ್ತಿ ತಂದಿದ್ದಾರೆ.

ಬಿಮ್ಸ್ ನಿರ್ದೇಶಕರಾದ ಡಾ. ಅಶೋಕ ಕುಮಾರ ಶೆಟ್ಟಿ  ಮತ್ತು ಮುಖ್ಯ ಆಡಳಿತ ಅಧಿಕಾರಿ  ಸಿದ್ದು ಹುಲ್ಲೋಳಿ, ಎಲ್ಲ ವಿಭಾಗಗಳ ಮುಖ್ಯಸ್ಥರು ವಿದ್ಯಾರ್ಥಿನಿಯನ್ನು ಅಭಿನಂದಿಸಿರುತ್ತಾರೆ.

Related Articles

Back to top button