Cancer Hospital 2
Beereshwara 36
LaxmiTai 5

*ಪ್ಯಾರಾ ಟೇಬಲ್ ಟೆನ್ನಿಸ್ ನ್ಯಾಷನಲ್ ರ್ಯಾಂಕಿಂಗ್ ಸ್ಪರ್ಧೆ; ಚಾಂಪಿಯನ್ ಆಗಿ ಹೊರಹೊಮ್ಮಿದ ಬೆಳಗಾವಿಯ ಹೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಸಂಜೀವ್ ಹಮ್ಮಣ್ಣವರ್*

Anvekar 3

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅಹಮದಾಬಾದ್‍ನಲ್ಲಿ ಇತ್ತೀಚೆಗೆ ನಡೆದ ಪ್ಯಾರಾ ಟೇಬಲ್ ಟೆನ್ನಿಸ್ ನ್ಯಾಷನಲ್ ರ್ಯಾಂಕಿಂಗ್ ಚಾಂಪಿಯನ್‍ಶಿಪ್ ಸ್ಪರ್ಧೆಯ ಎಂಎಸ್ 7 ವಿಭಾಗದಲ್ಲಿ ಬೆಳಗಾವಿಯ ಹೆಸ್ಕಾಂನ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಸಂಜೀವ್ ಹಮ್ಮಣ್ಣವರ್ ಅವರು ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.


ಭಾರತೀಯ ಟೇಬಲ್ ಟೆನ್ನಿಸ್ ಫೆಡರೇಶನ್ ಹಾಗೂ ಸ್ಪೋಟ್ರ್ಸ್ ಕ್ವಾಲಿಟಿ ಆಫ್ ಇಂಡಿಯಾ ಸಹಯೋಗದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಅಂತಿಮ ಸ್ಪರ್ಧೆಯಲ್ಲಿ ಸಂಜೀವ್ ಅವರು ಡಾ. ನಾಜಿಮ್ ಅವರನ್ನು 3-1 ಸೆಟ್‍ಗಳಲ್ಲಿ ಸೋಲಿಸುವ ಮೂಲಕ ಚಾಂಪಿಯನ್ ಪಟ್ಟ ಪಡೆದುಕೊಂಡರು. ಇದಕ್ಕೂ ಮುನ್ನ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಂಜೀವ್ ಅವರು ದೆಹಲಿಯ ಶಾರಿಕ್ ನಯಿಮ್ ಅವರನ್ನು ಹಾಗೂ ಸೆಮಿ ಫೈನಲ್ ಪಂದ್ಯದಲ್ಲಿ ದೆಹಲಿಯ ಅನ್ಸುಲ್ ಅಗರವಾಲ್ ಅವರನ್ನು ಸೋಲಿಸಿ ಫೈನಲ್ ತಲುಪಿದ್ದರು.

Emergency Service


ಮಿಕ್ಸೆಡ್ ಡಬ್ಬಲ್ಸ್‍ನಲ್ಲೂ ವಿಜಯ:
ಕ್ರೀಡಾಕೂಟದ ಮಿಕ್ಸೆಡ್ ಡಬ್ಬಲ್ಸ್‍ನ ಅಂತಿಮ ಪಂದ್ಯದಲ್ಲಿ ಸಂಜೀವ ಹಮ್ಮಣ್ಣವರ್ ಹಾಗೂ ಮಾಯವ್ವ ಅವರ ಜೋಡಿ ಗುಜರಾತದ ಯಜಡಿ ಬಾಮಗಾರ್ ಮತ್ತು ನೂರ್‍ಜಾನ್ ಅವರ ಜೋಡಿಯನ್ನು 3-2 ಅಂತರದಲ್ಲಿ ಮಣಿಸಿ ಬಂಗಾರದ ಪದಕಕ್ಕೆ ಭಾಜನವಾಯಿತು.

Bottom Add3
Bottom Ad 2